Showing posts with label ಎಚ್ಚರಿಲ್ಲೀ ಮನಕೆ ಯೋಚಿಸಿ ನೋಡದು ಚಿದ್ಫನಕೆ mahipati. Show all posts
Showing posts with label ಎಚ್ಚರಿಲ್ಲೀ ಮನಕೆ ಯೋಚಿಸಿ ನೋಡದು ಚಿದ್ಫನಕೆ mahipati. Show all posts

Wednesday, 1 September 2021

ಎಚ್ಚರಿಲ್ಲೀ ಮನಕೆ ಯೋಚಿಸಿ ನೋಡದು ಚಿದ್ಫನಕೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಎಚ್ಚರಿಲ್ಲೀ ಮನಕೆ ಯೋಚಿಸಿ ನೋಡದು ಚಿದ್ಫನಕೆ P

ನುಡಿದವು ಪರಮಾರ್ಥ ನಡೆಯೊಳಗಿಲ್ಲದೆ ನುಡಿದರ್ಥ ಹಿಡಿದು ವಿಷಯದ ಸ್ವಾರ್ಥಬಡುವುದು ಶ್ರಮತಾನೆ ವ್ಯರ್ಥ 1 
ಓದುದು ವೇದಾಂತ ಭೇದಿಸಿ ತಿಳಿಯದೆ ಅದರಂತ ವಾದ ಮಾಡುದು ಭ್ರಾಂತ ಸಾಧಿಸಿ ನೋಡದು ತನ್ನೊಳು ತಾ 2 
ಜನಕೇಳುದು ಬುದ್ದಿ ತನಗ ಮಾಡಿಕೊಳ್ಳದು ಸಿದ್ಧಿ ಕಾಣದ್ಹೇಳುದು ಸುದ್ಧಿ ಜ್ಞಾನಕ ಬಾರದು ತಾ ತಿದ್ದಿ 3 
ತೊಟ್ಟು ಉತ್ತಮ ವೇಷ ಮುಟ್ಟಿಗಾಣದೆ ಸ್ವಪ್ರಕಾಶ ತುಟ್ಟಿಲಿ ಜಗದೀಶ ಗುಟ್ಟಿಲಿ ಬಲಿವದು ಧನದಾಶೆ 4 
ಎಚ್ಚರಿಸಿತು ಖೂನ ನಿಶ್ಚಲ ಮಹಿಪತಿಗೆ ಗುರುಜ್ಞಾನ ಹುಚ್ಚುಗೊಂಡಿತು ಮನ ನೆಚ್ಚಿ ನಿಜಾನಂದದ ಘನ 5
***