Showing posts with label ಏನು ಗತಿ ಎನಗಿನ್ನು ಏನು ಗತಿಯೋ ನೀನು ಅನುಕೂಲವಾಹದನಕ ಸಿರಿ ಕೃಷ್ಣ vasudeva vittala. Show all posts
Showing posts with label ಏನು ಗತಿ ಎನಗಿನ್ನು ಏನು ಗತಿಯೋ ನೀನು ಅನುಕೂಲವಾಹದನಕ ಸಿರಿ ಕೃಷ್ಣ vasudeva vittala. Show all posts

Wednesday, 1 September 2021

ಏನು ಗತಿ ಎನಗಿನ್ನು ಏನು ಗತಿಯೋ ನೀನು ಅನುಕೂಲವಾಹದನಕ ಸಿರಿ ಕೃಷ್ಣ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಏನು ಗತಿ ಎನಗಿನ್ನು ಏನು ಗತಿಯೋ ನೀನು

ಅನುಕೂಲವಾಹದನಕ ಸಿರಿ ಕೃಷ್ಣ ಪ


ಕರಣಗಳು ಕಾಯ ಮೊದಲಾದ ಬದುಕುಗಳೆಲ್ಲ

ಸ್ಥಿರತರಗಳಲ್ಲೆಂದು ತೋರಿಸಲು

ಪರಮ ಭಕುತಿಯು ಪುಟ್ಟಿ ಮೊದಲೆ ನಾ ನಿನ್ನ ಪದ

ಮರೆದು ಬಿಡುವೆನು ತಡಿಯದೇ ಕರುಣಿ 1


ಹೀಗೆ ತೋರದೆ ಪೋದರೆ ಎನಗೆ ಹಂಬಲವು

ಆಗುವುದು ಸತ್ಯಲೋಕಗಳ ತನಕ

ಭೋಗಗಳು ಕೊಟ್ಟರೆ ಮರೆವೆ ಅದರಿಂದ ನಾ

ಕೂಗುವೆನು ಕೊಡದಿದ್ದರೆ 2

ಪಾಮರನ ಮಾಡಲೆನ್ನನು ತಿಳಿಯದಲೇವೆ

ಸೀಮೆ ಇಲ್ಲದ ಪಾಪ ಮಾಡುವೆನೊ

ಪ್ರೇಮದಲಿ ಪಾಂಡಿತ್ಯ ನೀಡಿದರೆ ಭಕುತ ಜನ

ಸ್ತೋಮ ನಿಂದಿಸುವೆನಯ್ಯಾ 3


ಧನದಿಂದ ಹೀನನ್ನ ಮಾಡೆ ಲೋಕದಲಿನ್ನು

ಜನರು ಕೊಡುವುದು ಎಲ್ಲ ಎನಗೆ ಕೊಡಲೆಂಬೆ

ಧನವು ನೀ ಕೊಡಲು ಬಲು ಮದದಿಂದ ಕೆಟ್ಟು ಸ-

ಜ್ಜನಕೆ ಕಾಸೊಂದು ಕೊಡಿನೊ 4


ಏಸು ಪರಿಯಲಿ ಪೇಳಿದರು ಕೇಳೆನ್ನ ನಿಜ

ವಾಸನಿಯು ತನಗೆ ತಾನಿಟ್ಟಾಹದೈ

ವಾಸುದೇವವಿಠಲ ನೀ ಎನ್ನಯ ಮನದಲ್ಲಿ

ವಾಸವನು ಮಾಡಿ ಬೋದÉೈಸದನಕೆÀ5

***