Showing posts with label ಳಳ- RSS- ಧ್ಯೇಯ ಪಥದಿ ದಿಟ್ಟ ತನದಿ others rss. Show all posts
Showing posts with label ಳಳ- RSS- ಧ್ಯೇಯ ಪಥದಿ ದಿಟ್ಟ ತನದಿ others rss. Show all posts

Friday, 24 December 2021

ಧ್ಯೇಯ ಪಥದಿ ದಿಟ್ಟ ತನದಿ others rss

 RSS song  


ಧ್ಯೇಯ ಪಥದಿ ದಿಟ್ಟ ತನದಿ ಹರುಷದಿಂದ ಸಾಗುವಾ |

ಅಜೇಯ ಶಕ್ತಿಯನ್ನು ಗಳಿಸಿ ವಿಜಯಭೇರಿ ಹೊಡೆಯುವಾ  ||ಪ||


ದೇಶಕಾಗಿ ಸತತ ಕಾದ ವೀರರನ್ನು ಸ್ಮರಿಸುವ

ಅವರ ಕಾರ್ಯದಿಂದ ನಾವು ಸ್ಫೂರ್ತಿಯನ್ನು ಪಡೆಯುವ

ವಿಶುದ್ಧ ರಾಷ್ಟ್ರಪ್ರೇಮದಿಂದ ನಾವು ಕಾರ್ಯರಂಗಕಿಳಿಯುವ  ||೧||


ಧ್ಯೇಯ ಮಾರ್ಗದಲ್ಲಿ ಬರುವ ಕಷ್ಟಗಳನು ಸಹಿಸುತ

ಹಿಮಾದ್ರಿಯಂತೆ ಅಚಲರಾಗಿ ಮಾತೆ ಸೇವೆಗೈಯುತ

ಎಡರಿನಲ್ಲಿ ಸುಖವ ಕಂಡು ಹಿಗ್ಗಿ ಹಾಡಿ ನಲಿಯುತ   ||೨||


ವಿಶಾಲ ಹಿಂದು ರಾಷ್ಟ್ರವನ್ನು ದೇಶದಲ್ಲಿ ಕಟ್ಟುವ

ಪ್ರೇಮ ಪಾಶದಿಂದ ಎಲ್ಲ ಬಂಧುಗಳನು ಸೆಳೆಯುವ

ಅವರ ಹೃದಯದಲ್ಲಿ ರಾಷ್ಟ್ರಜ್ಯೋತಿಯನ್ನು ಬೆಳಗುವ  ||೩||


ಹೃದಯಪುಷ್ಪದಿಂದ ನಾವು ಮಾತೆ ಪೂಜೆಗೈಯುವ

ನಿತಾಂತ ಭಕ್ತಿಯಿಂದ ನಾವು ಜನನಿಯನ್ನು ನಮಿಸುವ

ಭರತಮಾತೆ ಲೋಕಮಾತೆ ಎಂದು ಜಗಕೆ ತೋರುವ  ||೪||

***


dhyEya pathadi diTTa tanadi haruShadiMda sAguvA |

ajEya Saktiyannu gaLisi vijayaBEri hoDeyuvA ||pa||


dESakAgi satata kAda vIrarannu smarisuva

avara kAryadiMda nAvu sPUrtiyannu paDeyuva

viSuddha rAShTraprEmadiMda nAvu kAryaraMgakiLiyuva ||1||


dhyEya mArgadalli baruva kaShTagaLanu sahisuta

himAdriyaMte acalarAgi mAte sEvegaiyuta

eDarinalli suKava kaMDu higgi hADi naliyuta ||2||


viSAla hiMdu rAShTravannu dESadalli kaTTuva

prEma pASadiMda ella baMdhugaLanu seLeyuva

avara hRudayadalli rAShTrajyOtiyannu beLaguva ||3||


hRudayapuShpadiMda nAvu mAte pUjegaiyuva

nitAMta BaktiyiMda nAvu jananiyannu namisuva

BaratamAte lOkamAte eMdu jagake tOruva ||4||

***