ಯಾರಿದ್ದರೇನಯ್ಯ ನೀನಲ್ಲದೆನಗಿಲ್ಲ
ಕಾರುಣ್ಯನಿಧಿ ಹರಿಯೆ ಕೈಯ ಬಿಡಬೇಡ ||ಪ|
ದುರುಳ ಕೌರವನಂದು ದ್ರುಪದಜೆಯ ಸೀರೆಯನು
ಕರದಿಂದ ಸೆಳೆಯುತಿರೆ ಪತಿಗಳೆಲ್ಲ
ಗರಹೊಯ್ದಂತಿದ್ದರಲ್ಲದೇ ನರಹರಿಯೆ
ಕರುಣದಿಂ ನೀನಲ್ಲದಿನ್ಯಾರು ಕಾಯ್ದವರು ||
ಅಂದು ನೆಗಳಿನ ಬಾಧೆಯಿಂದ ಗಜರಾಜನು
ತಂದೆ ನೀ ವೈಕುಂಠದಿಂದ ಬಂದು
ಇಂದಿರೇಶನೆ ಚಕ್ರದಿಂದ ನೆಗಳಿನ ಬಾಯ
ಸಂಧಿಯನು ಸೀಳಿ ಪೊರೆದೆಯಲ್ಲೊ ಹರಿಯೆ ||
ಅಜಮಿಳನು ಕುಲಗೆಟ್ಟು ಕಾಲದೂತರು ಬರಲು
ನಿಜಸುತನ ಕರೆಯ ನೀನತಿವೇಗದಿ
ತ್ರಿಜಗದೊಡೆಯನೆ ಪುರಂದರವಿಠಲ ಕರುಣದಲಿ
ನಿಜದೂತರನು ಕಳುಹಿ ಕಾಯ್ದೆ ಗಡ ಹರಿಯೆ ||
***
pallavi
yAriddarEnayya nInalladenagilla kAruNyanidhi hariye kaiya biDa bEDa
caraNam 1
duruLa kauravananuja dhrupadajeya sIreyanu karadinda seLeyutire patigaLella
garahoidantiddaralladE narahariye karuNadim nInalladinyAru kAidavaru
caraNam 2
andu negaLina bAdheyinda gajarAjanu tande nI vaikuNThadinda bandu
indirEshane cakradinda negaLina bAya sandhiyanu sILi poredeyallo hariye
caraNam 3
ajamiLanu kula keTTu kAladUtaru baralu nijasudana kareya nInadi vEgadi
triajagadoDeyane purandara viTTala karuNadali nijadUtaranu kaLuhi kAide gaDa hariye
***