..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಕವನ ಪೇಳು ನೀ ಮನವೆ
ಆವಾವ ನೆವದಿದಾದ್ದು ಘನವೆ ಪ
ಭುವನ ಪಾವನ ಲಕ್ಷ್ಮೀ -
ಧವನ ನವಗುಣ ರೂಪ ಕ್ರಿಯವನ್ನೆ ಅ.ಪ
ಸ್ತವನ ಮಾಡಬೇಡÀ ನ್ಯಪನನ್ನು
ನವ ಯುವತೇರ ಮೆಚ್ಚಬೇಡ
ಪವನ ಭವ ಮತ ಬಿಡಬ್ಯಾಡ
ಭವದೊಳು ಮಮತೆ ಕೊಡಬ್ಯಾಡÉ 1
ಹರಿಕಥಾ ಶ್ರವಣ ಬಿಡಬ್ಯಾಡ
ಹರಿದಾಸರೊಳು ಛಲ ಇಡಬ್ಯಾಡ
ದುರುಳ ಮಾಯವಾದಿರ ಸ್ನೇಹ
ಅರಿತು ಮಾಡಲು ಅದು ಮಹಾಮೋಹ 2
ಅಜನಪಿತನ ಸ್ಮರಣೆ ಮರಿಬ್ಯಾಡ
ರುಜುಮಾರ್ಗವ ಬಿಟ್ಟು ನಡಿಬ್ಯಾಡ
ವಿಜಯ ರಾಮಚಂದ್ರವಿಠಲನ ಮರೆದು
ಗೋಜು ಕರ್ಮವ ಮಾಡಲಲ್ಲೇನು ಮಾತು 3
***