Showing posts with label ಎನ್ನ ಮನ ಕಂಡಕಡೆಗೆ ಎರಗುತಿದೆನಿನ್ನಲ್ಲಿ ನಿಲಿಸಿ ಕಾಯೊ shree krishna. Show all posts
Showing posts with label ಎನ್ನ ಮನ ಕಂಡಕಡೆಗೆ ಎರಗುತಿದೆನಿನ್ನಲ್ಲಿ ನಿಲಿಸಿ ಕಾಯೊ shree krishna. Show all posts

Wednesday, 1 September 2021

ಎನ್ನ ಮನ ಕಂಡಕಡೆಗೆ ಎರಗುತಿದೆನಿನ್ನಲ್ಲಿ ನಿಲಿಸಿ ಕಾಯೊ ankita shree krishna

 ..

ಎನ್ನ ಮನ ಕಂಡಕಡೆಗೆ ಎರಗುತಿದೆನಿನ್ನಲ್ಲಿ ನಿಲಿಸಿ ಕಾಯೊ ಪ


ಚಕ್ಷುರಿಂದ್ರಿಯಗಳಿಂದ ಚದುರೆಯರಈಕ್ಷಿಸಿ ನೊಂದೆನೈಯಶಿಕ್ಷಕನು ನೀನೆ ಎನಗೆ ಸಿರಿಯರಸಭಕ್ಕುತರೊಳಿಟ್ಟು ಕಾಯೋ 1


ಶ್ರೋತ್ರೇಂದ್ರಿಯಗಳಿಂದ ಸತತ ದು-ರ್ವಾರ್ತೆಗಳ ಕೇಳಿ ಕೆಟ್ಟೆಕರ್ತೃ ಎನಗೆ ನಿನ್ನಯಾ ಕಥೆಗಳನುಅರ್ಥಿಯಿಂದೆರೆದು ಕಾಯೋ 2


ಘಾಣೇಂದ್ರಿಯಂಗಳಿಂದ ದುರ್ಗಂಧಗಳಘ್ರಾಣಿಸಿ ನೊಂದೆನೈಯಪ್ರಾಣೇಶ ನಿನಗರ್ಪಿತ ಪರಿಮಳವಮಾಣದೆ ಇತ್ತು ಕಾಯೋ 3


ರಸನೇಂದ್ರಿಯಂಗಳಿಂದ ಷಡ್ರಸಗಳನುಹಸಿದು ನಾ ಸೇವಿಸಿದೆನೋಬಿಸಜಾಕ್ಷನೇ ನಿನ್ನಯ ಪ್ರಸಾದವನುಆಸ್ವಾದಿಸೆನಗೆ ದೇವ 4


ತ್ವಚೇಂದ್ರಿಯಂಗಳಿಂದ ತಾಮಸರಸೋಕಿ ನಾ ಕೆಟ್ಟೆನೆಯ್ಯಕಾಕು ಮಾಡದೆ ಎನ್ನನು ಸಿರಿಕೃಷ್ಣಸಾಕಾರನಾಗಿ ಸಲಹೋ 5

***