Showing posts with label ಎಷ್ಟು ದಿವಸ ಹೀಗೆ ಕಳೆಯಲೊ ಗೋಪಾಲಕೃಷ್ಣ gopalakrishna vittala. Show all posts
Showing posts with label ಎಷ್ಟು ದಿವಸ ಹೀಗೆ ಕಳೆಯಲೊ ಗೋಪಾಲಕೃಷ್ಣ gopalakrishna vittala. Show all posts

Sunday, 1 August 2021

ಎಷ್ಟು ದಿವಸ ಹೀಗೆ ಕಳೆಯಲೊ ಗೋಪಾಲಕೃಷ್ಣ ankita gopalakrishna vittala

ಎಷ್ಟು ದಿವಸ ಹೀಗೆ ಕಳೆಯಲೊ ಗೋಪಾಲಕೃಷ್ಣ

ಎಷ್ಟು ದಿವಸ ಹೀಗೆ ಕಳೆಯಲೊ ಪ.


ಎಷ್ಟು ದಿವಸ ಹೀಗೆ ಎನ್ನ ಸೃಷ್ಟಿಗೊಡೆಯ ಬಳಲಿಸುವೆಯೊ

ಕಷ್ಟಪಡಲಾರೆ ಭವದಿ ದೃಷ್ಟಿಯಿಂದ ನೋಡಿ ಸಲಹೋ ಅ.ಪ.


ನಾನಾ ಜನ್ಮದಿ ತೊಳಲಿಸಿ ಎನ್ನನು

ನೀನೆ ತಂದೆಯೊ ಮಾನವತ್ವದಿ

ನಾನು ಎಂಬುದು ಬಿಡಿಸಿ ಈಗ

ನೀನೆ ಕರ್ತನೆನಿಸಿ ಕಾಯೋ1

ದೇಹಸ್ಥನೆಂದೆನಿಸಿ ಎನ್ನ

ದೇಹ ಮಧ್ಯದಿ ಕಾಣದಿಹರೆ

ದೇಹಗಳನು ಧರಿಸಲಾರೆ

ದೇಹ ಮೋಹ ಬಿಡಿಸದಿಪ್ಪರೆ 2

ಭೃತ್ಯವತ್ಸಲನೆಂದು ನಿನ್ನ

ಭಕ್ತರೆಲ್ಲರು ಕರೆಯುತಿಹರೊ

ಪೊತ್ತ ಬಿರುದು ಬಿಡುವರೇನೊ

ಭೃತ್ಯಳೆಂದು ಎನ್ನ ಸಲಹೊ3

ಪೋಗುತಿದÉ ದಿವಸ ನೋಡು

ಬೇಗ ಬೇಗನೆ ದಯವ ಮಾಡು

ಭೋಗದಲಿ ವೈರಾಗ್ಯ ನೀಡು

ಭಾಗವತರ ಸಂಗ ಕೊಡು 4

ಕರ್ಮದಲ್ಲಿ ಶ್ರದ್ಧೆಯಿಲ್ಲ

ಧರ್ಮದಲ್ಲಿ ಬುದ್ಧಿಯಿಲ್ಲ

ನಿರ್ಮಲದ e್ಞÁನವಿಲ್ಲ

ನಿರ್ಮಲಾತ್ಮ ಬಲ್ಲೆಯಲ್ಲ 5

ಅಂಧಕಾರದಿ ಎನ್ನನಿರಿಸಿ

ಚಂದವೇನೋ ಹೀಗೆ ಮಾಳ್ಪದು

ದ್ವಂದ್ವ ಕರ್ಮ ಸ್ವೀಕರಿಸಿ

ಮುಂದೆ ಕರ್ಮವಿಡದೆ ಸಲಹೋ 6

ಅಪಾರ ಜನುಮದಲ್ಲಿನ

ಪಾಪ ಸಮೂಹಗಳ ತರಿದು

ಶ್ರೀಪಾದ ಸ್ಮರಣೆ ನೀಡೋ

ಗೋಪಾಲಕೃಷ್ಣವಿಠಲ 7

****