Showing posts with label ಪೇಳಲಳವೆ ನಿನ್ನ ಮಹಿಮೆಯ ಶ್ರೀರಂಗ purandara vittala. Show all posts
Showing posts with label ಪೇಳಲಳವೆ ನಿನ್ನ ಮಹಿಮೆಯ ಶ್ರೀರಂಗ purandara vittala. Show all posts

Friday, 6 December 2019

ಪೇಳಲಳವೆ ನಿನ್ನ ಮಹಿಮೆಯ ಶ್ರೀರಂಗ purandara vittala

ಪುರಂದರದಾಸರು
ಪೇಳಲಳವೆ ನಿನ್ನ ಮಹಿಮೆಯ ಶ್ರೀರಂಗಧಾಮ|ಪೇಳಲಳವೆ ನಿನ್ನ ಮಹಿಮೆಯ ಪ

ನೀಲಮೇಘಶ್ಯಾಮ ನಿನ್ನ |ಬಾಲಲೀಲೆಯಾಟವ ಅ.ಪ

ವಿಷದ ಮೊಲೆಯ ಪೂತನಿಯ |ಅಸುವ ಹೀರಿದ ಶೂರನಾದೆ |||ಉಸಿರಲಳವೆ ನಿನ್ನ ಮಹಿಮೆ |ಅಮ್ಮಮ್ಮಮ್ಮಮ್ಮಮ್ಮ ||ಕೆಸರ ತಿನಬೇಡೆನುತ ತಾಯಿ |ಶಿಶುವಿನ ವದನವ ನೋಡಿದಳಾಗ |ದಶಚತುರ್ಭುವನವ ತೋರಿದ ಬಾಯೊಳ |ಗಲ್ಲಲ್ಲಲಲ್ಲಲ್ಲಲ್ಲೇ 1

ಬಾಲಲೀಲೆಯ ಬಂಡಿ |ಕಾಲಿಲೊದ್ದು ಶಕಟಾಸುರನ ||ಮೂಲನಾಶ ಮಾಡಿದೆ ನೀ |ನಬ್ಬಬ್ಬಬ್ಬಬ್ಬಬ್ಬಬ್ಬ ||ತಾಳಮರದ ನಡುವೆಒರಳ|ಕಾಲಿಗೆ ಕಟ್ಟೆಳೆಯುತಿರಲು |ಬಾಲ ಸತ್ತನೆಂದುಗೋಪಿಅತ್ತ-|ಳಯ್ಯಯ್ಯಯ್ಯಯ್ಯಯ್ಯಯ್ಯೊ 2

ಸಣ್ಣವನಿವನಲ್ಲ ನಮ್ಮ |ಬೆಣ್ಣೆ ಕದ್ದು ಗೊಲ್ಲರ ಮನೆಯ |ಹೆಣ್ಣು ಮಕ್ಕಳನು ಹಿಡಿದ ಕಳ್ಳ |ಎಲ್ಲೆಲ್ಲೆಲ್ಲೆಲ್ಲೆಲ್ಲೆಲ್ಲೆ ||ನಿನ್ನಾಣೆಯಿಲ್ಲೆಂಬ ರಂಗನ |ಬಿನ್ನಾಣಕೆ ನಕ್ಕವರನು ಬಯ್ಯುತ |ಎನ್ನ ಕಂದ ಹುಸಿಯನಾಡ |ನೆಂದೆಂದೆಂದೆಂದೆಂದು 3

ನಾರಿಯರೆಲ್ಲ ಬತ್ತಲೆಯಾಗಿ |ನೀರಾಟವನಾಡುತಿರಲು |ಸೀರೆಗಳೊಯ್ದು ಮರವನೇರಿದ |ನತ್ತತ್ತತ್ತತ್ತತ್ತತ್ತ ||ವಾರಿಜಮುಖಿಯರು ಲಜ್ಜೆಯ ದೊರೆದು |ಸೀರೆಗಳನು ಬೇಡಲವರಮೋರೆ ನೋಡಿ ರಂಗ ನಕ್ಕ |ಅಬ್ಬಬ್ಬಬ್ಬಬ್ಬಬ್ಬಬ್ಬ 4

ಕಾಡು ಕಿಚ್ಚು ಮುಸುಕಿ ಗೋವ-|ವಾಡಿಯು ಬೆಂದದ್ದು ನೋಡಿ |ಈಡಿಲ್ಲದ ಉರಿಯ ತೀಡಿದ |ಅತ್ತತ್ತತ್ತತ್ತತ್ತತ್ತ ||ಬೇಡಿದ ವರಗಳನೀವ |ಪುರಂದರವಿಠಲನ ಲೀಲೆಯ |ರೂಢಿಯೊಳೀಡನ ಸಮರು ಯಾರುಇಲ್ಲಿಲ್ಲಿಲ್ಲಿಲ್ಲಿಲ್ಲಿಲ್ಲ 5
***

pallavi

pELalaLave ninna mahimeya shrI ranga dhAmA pELalaLave ninna mahimeya

anupallavi

nIla mEgha shyAma ninna bAla lIleyATava

caraNam 1

viSada moleya pUtaniya asuva hIrida shuranAde
usiralaLave ninna mahime ammammammammammamma
kesara tina bEDenuta tAyi shishuvina vadanava nODidaLAga
dasha caturbhuvana tOrida bAyoLagallallallallallalle

caraNam 2

bAla lIleyali baNDi kAliloddu shakaTAsurana
mUla nAsha mADide nInabbabbabbabbabbabbabba
tALamarada naDuve oraLa kAlige kaTTaLeyutiralu
bAla sattanendu gOpi attaLayyayyayyayyayyayyo

caraNam 3

saNNavanivanalla namma beNNe kaddu gollara maneya
heNNu makkaLanu hiDida kaLLa ellellellellellelle
ninnANeyillamba rangana binnANake nakkaravanu payyuta
enna kanda husiyanADanendendendendendendu

caraNam 4

nARiyarella battaleyAgi nIrATavanADutiralu
sIregaLoidu maravanEridanattattattattattatta
vArija mukhiyaru lajjeya toredu sIregaLanu bEDalavara
mOre nODi ranga nakka abbabbabbabbabbabba

caraNam 5

kADu kiccu musuki gOvavADiyu bendaddu nODi
Idillada uriya TIDida attattattattattatta
bEDida varagaLanIva purandara viTTalana lIleya
rUDhiyoLItana samaru yAru illillillillillilla
***