..
kruti by ವೀರನಾರಾಯಣ Veeranarayana
ಬುಗುರಿ ಆಡೋ ತಮ್ಮ ಬುಗುರಿ ಆಡೊ ಪ
ಬಗೆ ಬಗೆ ಜನುಮದಿ ತಿರುಗಿ ತಿರುಗಿ ಬಂದೊದಗತನದನುಭವ ಪರಿಕಿಸಿ ನೋಡೊ ಅ.ಪ.
ತನುವೆಂಬುದೆ ಕೊರಡಿನ ತುಂಡುದಿನದ ಕರ್ಮವೆ ಕೊನೇರು ದುಂಡುಮನವೆಂಬುವ ಮೊಳೆಯನು ಚುಚ್ಚಿಕೊಂಡುಘನ ಹರುಷದಿ ಕರದಲಿ ಕೊಂಡು 1
ಭವವೆಂಬುದೆ ನಿನ್ನ ಜಾಳಿಗೆ ನೋಡೋತವಕದಿ ಬಿಡದಲೆ ಬಿಗಿಗಿಸುತ್ತ್ಯಾಡೋಸವಿಯನುಂಡು ನೀ ಹರಿಯನು ಬೇಡೊಜವದಲಿ ಝಾಡಿಸಿ ಭರದಿ ಬೀಸಾಡೊ 2
ಧರೆಯ ಗದುಗಿನ ವೀರನಾರಾಯಣನಚರಣದಿ ಮೊಳೆಯೂರಿ ತಿರುಗುತಲಾಡೊಕರಣಗಳಳೆದು ಏಕ ಚಿತ್ತದಿಸ್ಮರಿಸುತ ನಿಂತು ನಿದ್ದೆಮಾಡೊ 3
***