..
kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru)
ದಯಮಾಡೋ ರಂಗ ಹೇ ಕೃಪಾಂಗ ಪ
ದಯಮಾಡಿ ನೀಯೆನ್ನ ಭಯವ ಪರಿಹರಿಸು ಚಿ-
ನ್ಮಯ ಮೂರುತಿ ಸುಖಮಯ ಮಂದರಧರ ಅ.ಪ.
ಪತಿತ ಪಾವನ ನೀನು ಪತಿತಾಗ್ರೇಸರ ನಾನು
ಜತನದಿ ಭಕುತಿಯ ಪಥವ ತೋರಿ ನೀನು 1
ಮುಕ್ತಿ ಫಲಪ್ರದ ಶಕ್ತಿಯು ನಿನ್ನ ವ್ಯತಿರಿಕ್ತವಲ್ಲವೆಂದು
ಭಕ್ತಿಯುವರವಳು...[?] 2
ಕಾಮಧೇನು ನೀನು ಕಾಮನಯ್ಯನು ನೀನು
ಕಾಮಿತಫಲದಾತ ಮಾಮನೋಹಕ ತ್ರಾತ 3
ಸೃಷ್ಟಿಪಾಲಕ ನಿನ್ನ ಯಷ್ಟೆಂತವರ್ಣಿಪೆ
ಅಷ್ಟು ಕರ್ತೃತ್ವಕ್ಕೆ ಶಿಷ್ಟಮೂರುತಿ ನೀನೆ 4
ಭಾರಿಭಾರಿಗೆ ನಿನ್ನ ಆರಾಧಿಸುವರ
ಚಾರುಚರಣವನು ತೋರೊ ಮಾರಜನಕ 5
ಸಕಲಕ್ಕು ನೀ ಮುಖ್ಯ ಶಕಟಭಂಜನ ಕೇಳು
ಪ್ರಕಟನಾಗಿಯೆನಗೆ ಶಕ್ತಿಯ ನೀಡೋ6
ಭೂವಲಯದೊಳು ನಾ ಆವಲ್ಯಪೋಗಲು
ಕಾವಲು ನೀನೇ ಶ್ರೀವತ್ಸಾಂಕಿತನೇ 7
***