Showing posts with label ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ ಹ್ಯಾಂಗೆ ಇರಬೇಕು purandara vittala HYANGE BAREDITTU PRAACHEENADALLI HYANGE IRABEKU. Show all posts
Showing posts with label ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ ಹ್ಯಾಂಗೆ ಇರಬೇಕು purandara vittala HYANGE BAREDITTU PRAACHEENADALLI HYANGE IRABEKU. Show all posts

Monday, 20 December 2021

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ ಹ್ಯಾಂಗೆ ಇರಬೇಕು purandara vittala HYANGE BAREDITTU PRAACHEENADALLI HYANGE IRABEKU





ರಾಗ : ಮೋಹನ  ತಾಳ : ಛಾಪು



raga mohana


ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ || ಪ ||

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಅದು ಹಾರಿಹೋದಂತೆ || ೧ ||

ಸಂತೆ ನೆರೆಯಿತು ನಾನಾ ಪರಿ
ತಿರುಗಿ ಹಿಡಿಯಿತು ತಮ್ಮ ತಮ್ಮ ದಾರಿ || ೨ ||

ಆಡುವ ಮಕ್ಕಳು ಮನೆಯ ಕಟ್ಟಿದರು
ಆಟ ಸಾಕೆಂದು ಮುರಿದೋಡಿದರು || ೩ ||

ವಸತಿಕಾರನು ವಸತಿಗೆ ಬಂದಂತೆ
ಹೊತ್ತಾರೆದ್ದು ಹೊರಟು ಹೋದಂತೆ || ೪ ||

ಸಂಸಾರ ಪಾಶವ ನೀನೇ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ || ೫ ||
***


Hyange bareditto pracinadalli
Hange irabeku samsaradalli ||pa||

Pakshi angaladalli bandu kutante
A kshanadalli adu harihodante ||1||

Sante nereyitu nana pari
Tirugi hidiyitu tamma tamma dari ||2||

Aduva makkalu maneya kattidaru
Ata sakendu muridodidaru ||3||

Vasatikaranu vasatige bandante
Hottareddu horatu hodante ||4||

Samsara pasava nine bidisayya
Kamsari purandaraviththalaraya ||5||
***

pallavi

hyAnge baredittu prAcInadalli
hyAnge irabEku samsAradalli   

caraNam 1

Aduva makkaLU maneya kaTTidaru Adi sAkendu muridu Odidaru

caraNam 2

santeyu nereyitu nAnApari pAnthastharhOdaru tantamma dAri

caraNam 3

hakki bandittu angaLadalli hAri hOyitu A kSaNadalli

caraNam 4

vastigAranu vastige banda hottAre eddu horaDuhOda

caraNam 5

samsAravembo pAshu biDisalu kamsAri purandara viTTalana smariso
***


pallavi

hingeyirabEku samsAradalli hinge baradindu prAcInadali

caraNam 1

hakki banditu angaLadalli hAri hOyitu A kSaNadalli

caraNam 2

ADO makkaLu mane kaTTidaru ATa sAkendu mattODidaru

caraNam 3

vasatigAramanige banda beLageddu tirigi hOdA

caraNam 4

santenerayutu nAnApari mattu hOyitu tamatamadAri

caraNam 5

samsArada hambalava nI biDisO purandara viTTala dayadinda nODO
***

ಹ್ಯಾ ೦ಗೆ ಇರಬೇಕು ಸ೦ಸಾರದಲ್ಲಿ
ಹ್ಯಾ೦ಗೆ ಬರೆದಿತ್ತೋ ಪ್ರಾಚಿನದಲ್ಲಿ

ಪಕ್ಷಿ ಅ೦ಗಳದಲ್ಲಿ ಬ೦ದು ಕೋತ೦ತೆ
ಆ ಕ್ಷಣದಲ್ಲಿ ಹಾರಿ ಹೋದ೦ತೆ II೧II

ನಾನಾ ಪರಿಯಲೇ ಸ೦ತೆ ನೆರೆದ೦ತೆ
ನಾನಾ ಪ೦ಥದ ಹಿಡಿದು ಹೋದ೦ತೆ II೨II

ಮಕ್ಕಲಾಡಿ ಮನೆ ಕಟ್ಟಿದ೦ತೆ
ಆಟ ಸಾಕೆ೦ದು ಅಳಸಿ ಪೋದ೦ತೆ II೩II

ವಸತಿಕಾರನು ವಸತಿ ಕ೦ಡ೦ತೆ
ಹೂತ್ತಾರೆ ಎದ್ದು ಹೊರಟು ಹೋದ೦ತೆ II೪II

ಸ೦ಸಾರ ಪಾಶವ ನೀನೆ ಬಿಡಿಸಯ್ಯ
ಕ೦ಸಾರಿ ಪುರ೦ದರವಿಠಲರಾಯ II೫II
*************


ಹೇಗೆ ಬರೆದೀತು ಪ್ರಾಚೀನದಲ್ಲಿ
ಹಾಗೆ ಇರಬೇಕು ಸಂಸಾರದಲ್ಲಿ

ಪಕ್ಷಿ ಕೂತಿತು ಅಂಗಳದಲ್ಲಿ
ಹಾರಿ ಹೋಯಿತು ಆ ಕ್ಷಣದಲ್ಲಿ

ಆಡುವ ಮಕ್ಕಳು ಮನೆ ಕಟ್ಟಿದರು
ಆಟ ಸಾಕೆಂದು ಮುರಿದೋಡಿದರು

ಸಂತೆ ನೆರೆದೀತು ನಾನಾ ಪರಿ
ತಿರುಗಿ ಆಯಿತು ತಮ್ಮ ತಮ್ಮ ದಾರಿ

ವಸ್ತಿಕಾರನು ವಸ್ತಿಗೆ ಬಂದ
ಹೊತ್ತಾರೆ ಎದ್ದು ಊರಿಗೆ ಹೋದ

ಈ ಸಂಸಾರಮಾಯ ಬಿಡಿಸಿ
ಕಾಯೊ ಪುರಂದರವಿಠಲ ||
*********


ರಾಗ ಮುಖಾರಿ ಅಟತಾಳ

ಹಾಂಗೆ ಇರಬೇಕು ಸಂಸಾರದಲ್ಲಿ
ಹ್ಯಾಂಗೆ ಬರೆದಿತ್ತೋ  ಪ್ರಾಚೀನದಲ್ಲಿ ||

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಹಾರಿ ಹೋದಂತೆ
ನಾನಾ ಪರಿಯಲ್ಲಿ ಸಂತೆ ನೆರೆದಂತೆ
ನಾನಾ ಪಂಥವ ಹಿಡಿದು ಹೋದಂತೆ ||

ವಸ್ತಿಗಾರನು ವಸ್ತಿ ಬಂದಂತೆ 
ಹೊತ್ತಾರೆ ಎದ್ದು ಹೊರಟುಹೋದಂತೆ 
ಸಂಸಾರವೆಂಬೋ ಪಾಶ ನೀನೇ ಬಿಡಿಸಯ್ಯ 
ಕಂಸಾರಿ ಪುರಂದರವಿಠಲರಾಯ  ||
********