ಪುರಂದರದಾಸರು
ಆಣಿ ಮುತ್ತಿನ ದುಂಡುಮಕರಕುಂಡಲನ |ಬಾನುಪ್ರಭೆಯ ಭುಜಕೀರ್ತಿಯೊಪ್ಪುವನ ||
ಕಮಲಾಮನೋಹರ ಕಮಲಜ ಪಿತನ |ರಮಣಿಗೆ ಪಾರಿಜಾತವನೇ ತಂದವನ ||
ಕ್ರಮದಿಂದ ಭಸ್ಮಾಸುರನ ಕೊಂದವನ |ರಮೆಯಾಣ್ಮನೆನ್ನಲು ಇಹಪರವೀವನ
ಶುಕ್ರವಾರ ಪುಲಕು ಪೂಜೆಗೊಂಬವನ |ಸಕ್ಕರೆ-ಹಾಲು-ಬೆಣ್ಣೆಯ ಮೆಲ್ಲುವವನ ||
ಗಕ್ಕನೆ ಸುರರಿಗೆ ಅಮೃತವಿತ್ತವನ |ರಕ್ಕಸದಲ್ಲಣ ರಾವಣಾಂತಕನ
ಪಾಪವಿನಶಾದಿ ಸ್ನಾನವ ಮಾಡಿ |ಪಾಪಗಳೆಲ್ಲ ಬೇಗನೆ ಬಿಟ್ಟು ಓಡಿ ||
ಈ ಪರಿಯಿಂದಲಿ ಮೂರುತಿ ನೋಡಿ |ಶ್ರೀಪತಿ ಪುರಂದರವಿಠಲನ ಪಾಡಿ
******