Showing posts with label ಎನ್ನ ಸಲಹೋ ಚರಣವನ್ನು ದೋರಿ ಪರಮ ನಿನ್ನ ಕಿಂಕರನೆಂದು gurumahipati. Show all posts
Showing posts with label ಎನ್ನ ಸಲಹೋ ಚರಣವನ್ನು ದೋರಿ ಪರಮ ನಿನ್ನ ಕಿಂಕರನೆಂದು gurumahipati. Show all posts

Wednesday, 1 September 2021

ಎನ್ನ ಸಲಹೋ ಚರಣವನ್ನು ದೋರಿ ಪರಮ ನಿನ್ನ ಕಿಂಕರನೆಂದು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಎನ್ನ ಸಲಹೋ ಚರಣವನ್ನು ದೋರಿ ಪರಮ| ನಿನ್ನ ಕಿಂಕರನೆಂದು ಘನ್ನದಯವನು ಬೀರಿ ಎನ್ನಾ ಪ 


ಶರಣ ಜನ ಮಾನ ರಕ್ಷಕನೇ ವರಕಮಲ ಕರಕಮಲ ಪದವಿಮಲ ಮಹಿಮನೇ ಸಕಲ ಗುಣಧಾಮ ಘನಶ್ಯಾಮ ಸುರ ರಿಪು ಮಥನ| ಗೋಕುಲರಿ ಸೋದರಾನಂತ ಗುಣಾ ಶ್ರೀ ಹರಿ ಭಕ್ತರ ವಸರಕೊದಗುವೆ ನೀ ಪರೋಪರಿ| ಸುಕಲ್ಪತರು ದನುಜ ಕುಲಸಂಹಾರ ಸರ್ವದುರಿತ ನಿವಾರಾ 1 

ಅಖಿಳ ಶೃತಿ ಸ್ಮøತಿ ನಿಕರಲಿಂದ ನುತಿಸಿಕೊಂಬೆ| ವಿಕಸಿತನುಪಮ ವದನಬ್ಜ ಕುಲ ಅಬ್ಜರವಿ ಪ್ರಕಟದೊಳೊದಗಿ ಬಂದೆ ಸರಸೀರುಹ ನಯನ ಜಗದ ತಂದೇ| ಸಿರಿನಂದ ನಂದನ ಪರಮುದಾರೇ| ಸುರವೃಂದ ರಕ್ಷಕ ವರ ಮುರಾರೇ 2 

ಶರಣಾಗತ ಜನರ ಪಾಲಾ| ಸಿರಿ ಉರಗಾರಿಗಮನ ಸೂರಾರಿ ಸಿಬಿಕುಲ| ಶೌರಿ ನರಸಹಕಾರಿ ಗಿರಿಧರನೇ| ಕರುಣಾಕರ ತ್ರಯದಿ ಸ್ಮರಣ ಮಾಳ್ಪರ ಭಯವ| ಹರಣ ಶರಣ ಕೌಸ್ತುಭಾಭರಣ ನೀಲವರಣಾನಂದ3 

ವರ ಶ್ರೀರಮಣ ದೇವ ಜಗಜೀವ ಮಹಿಪತಿ ನಂದ ನೊಡಿಯ| ಪರಮಾನಂದ ಜೀವದೊರಿಯೇ| ಭವ ವಿನುತ ಮತಿ ಚರಿತಾ ಸಿಂಧೂರ| ನವನೀತ ಚೋರ ಜಗದೀಶ ಹರಿಯೇ4

***