..
kruti by ವೀರನಾರಾಯಣ Veeranarayana
ಚಂಚಲಿಸಲು ಕೊಡದಿರು ನೀನೆನ್ನ ಮನಕೆ ಶ್ರೀಹರಿಯೇ ಪ
ವಂಚಿಸುತಿಹುದೀ ಮನವು ಸ್ಥಿರಗೊಳಿಸಲರಿಯೇ ಅ.ಪ.
ನಿನ್ನ ಪದದಿ ಏನಿರಿಸೆ ಇನ್ನು ಭಜಿಸಬೇಕೆಂದರೆಭಿನ್ನ ದೆಸೆಗೆ ಓಡಿಸದೆ ಅನ್ಯವನ್ನೆ ಚಿಂತಿಸುವುದು 1
ಕಡಲ ಕಡಿಯುವಾಗ ಗಿರಿಯು ನಡುಗದಂತೆ ಗಟ್ಟಿ ನಿಂತುಹಿಡಿದ ತೆರದೊಳಡಲ ಹೊಕ್ಕು ಜಡಿದು ಎನ್ನ ಮನದಿ ನಿಂದು 2
ಸದಾ ಭಜಿಸುವಂತೆ ಮಾಡೋ ಗದುಗು ವೀರನಾರಾಯಣ 3
***