Showing posts with label ಇಂದು ಪಾವನವಾಗಿರೊ ಇಂದಿರಾ ರಮಣನ್ನ vijaya vittala. Show all posts
Showing posts with label ಇಂದು ಪಾವನವಾಗಿರೊ ಇಂದಿರಾ ರಮಣನ್ನ vijaya vittala. Show all posts

Thursday, 17 October 2019

ಇಂದು ಪಾವನವಾಗಿರೊ ಇಂದಿರಾ ರಮಣನ್ನ ankita vijaya vittala

ಇಂದು ಪಾವನವಾಗಿರೊ |
ಇಂದಿರಾ ರಮಣನ್ನ ದಿನ ವ್ರತವ ಮಾಡಿ ಪ

ಅನುಜ ನಿಜಾಂಗನೆ |
ತನಯರು ನೆರೆಹೊರೆ ಮನ ಜನಕೆ |
ಸಿರಿ |
ದಿನ ತ್ರಯವನು ಅನುಸರಿಸಿರೆಂದು 1

ಏಕಾದಶಿದನ ವಿಕೇತನದಲಿ ಪಾಕ ಮಾಡಿದರದು |
ಕಾಕಮಾಂಸ ಲೋಕದೊಳಗೆ ಸರಿ | ಲೋಕದೊಳಗೆ ಎಂದು |
ತಾ ಕೂಗಿ ಸುಖದಲ್ಲೀ |
ವಾದ ಪೇಳುತಲಿದ್ದು ಏಕ ಭಕುತಿಯಲ್ಲೀ2

ಹರಿದಿನದಲ್ಲಿ ನೀರು ಬೆರಳಲಿ ಸುರಿದಾ |
ಭೂಸುರನು ಚಾಂಡಾಲನು ನಿರುತದಲೀ |
ವರಗೋಮಾಂಸ ನರಕಾ | ನರಿ ನಾಯಿರಾಸ |
ಸೂಕರ ಭಕ್ಷಣಿಗಿಂತ | ಪರಮ ಉತ್ತಮನೆಂದು 3

ಪ್ರಾಣತ್ಯಾಗವಾಗಿ ಹಾನಿ ಪ್ರಾಪುತದಿಂದ |
ಏನೇನು ಸಂಕಟ ತಾನೊದಗೆ |
ಆನಂದ ಮತಿ ಈವಾ ಶ್ರೀನಾಥನ ದಿವಸ |
ಧಾನ್ಯದಲಿಟ್ಟು ನಿದಾನಕೆ ಗತಿ ಎಂದು 4

ಇತರ ದಿವಸದಲ್ಲಿ ಅತಿಶಯದಿಂದಲೀ |
ಕೃತ ಕರ್ಮಗಳು ವಿಹಿತವಹುದೂ |
ರತಿಪತಿಪಿತನ ಅಪ್ರತಿವಾಸರದಲ್ಲೀ |
ಅತಿ ಅವಶ್ಯಕವಾ ವರ್ಜಿತ ಮಾಡಿ ಸಜ್ಜನರು 5

ಎಲೆ ಹಾಕದೆ ಜಾಗರವ ಬೇಸರದಲೆ |
ಲವಲವಿಕೆಯಿಂದ ಕವಿಗಳೊಡನೆ |
ತವಕದಿಂದಲಿ ಪಾಡುತ ಗಾಯನ ಶುದ್ಧಾ |
ಶ್ರವಣ ಮಾಡುತ್ತ ಸದಾ | ಪವನ ಮತದೊಳಿದ್ದು6

ದಶಮಿ ವಂದು ಏಕಾದಶಿ ಎಂಟು ತಿಳಿದು |
ದ್ವಾದಶಿ ಐದು ಹ | ದಿನಾಲ್ಕು ಎಸವ ಝವಾ |
ಪುಶಿಯಲ್ಲ ಇದು ಸಿದ್ಧಾ ಅಸುಯವ ಬಡದಲೇ |
ಕುಶಲದಿಂದಲಿ ವ್ರತ ಚರಿಸುತ್ತಲಿ ಚನ್ನಾಗಿ 7

ಏಳೊಂದು ವತ್ಸರದ ಮೇಲೆ |
ವತ್ಸರ ಬಿಟ್ಟು ವಾಲಾಯ ಉಳಿದವರು |
ನೀಲವರ್ಣನ ವ್ರತವಾ ಲೀಲೆಯಿಂದಲಿ ಚರಿಸಿ 8

ಆವಾದಾದರ ಬಿಡದಿರೀ |
ಕೇವಲ ಸಾಧನವೂ |
ಈ ವಾರವು ದೇವೇಶ ವಿಜಯವಿಠ್ಠಲಗೆ ಸಮರ್ಪಿಸೆ |
ಸೇವಿಯ ಪಾಲಿಸಿ ಕೈವಲ್ಲ್ಯದಲಿ ಇಡುವಾ 9
********