Showing posts with label ಶೋಭಾನ ಪಾಂಡುರಂಗಗೆ ಶೋಭನ ಶ್ರೀನಿವಾಸಗೆ pranesha vittala. Show all posts
Showing posts with label ಶೋಭಾನ ಪಾಂಡುರಂಗಗೆ ಶೋಭನ ಶ್ರೀನಿವಾಸಗೆ pranesha vittala. Show all posts

Sunday, 17 November 2019

ಶೋಭಾನ ಪಾಂಡುರಂಗಗೆ ಶೋಭನ ಶ್ರೀನಿವಾಸಗೆ ankita pranesha vittala

by ಪ್ರಾಣೇಶದಾಸರು
ಶೋಭಾನ ಪಾಂಡುರಂಗಗೆ | ಶೋಭನ ಶ್ರೀನಿವಾಸಗೆ |ಶೋಭನಉಡುಪಿನಿಲಯಾಗೇ ಪ

ಸುಮನಸರಾಳ್ದವನ ವರಜ ಬಾ |ಕಮಲೆಸದನಮುಖಕಂಜರವಿಬಾ |ವಿಮಲ ಗುಣಾರ್ಣವನೀಲಜಲದನಿಗಾತ್ರಾ ಬಾ ||ವಾರಿಜನೇತ್ರ ಬಾ ಮಂಗಳ ಸ್ತೋತ್ರ ಬಾ |ವಹನ ಪತತ್ರಾ ಬಾ ನತಜನ ಮಿತ್ರಾ ಬಾಹಸಿಯಾ ಜಗುಲೀಗೇ 1

ಅಷ್ಟನಾಮ ಒಪ್ಪುವನೇ ಬಾ |ದುಷ್ಟ ದಿತಿ ಸುತ ಮದಹರಣಾ ಬಾ |ಮುಷ್ಟಿಕ ಪ್ರಮುಖಹ ಗೋವರ್ಧನಧರ ಕೃಷ್ಣಾ ಬಾ ||ಹರಿಗತಕಷ್ಟಾ ಬಾ ತ್ರಿಜಗಚ್ಚೇಷ್ಟಾ ಬಾ |ಅಕ್ಷರಜೇಷ್ಠಾ ಬಾ ನಿರುತ ವಿಶಿಷ್ಟಾ ಬಾಹಸಿಯಾ ಜಗುಲೀಗೇ 2

ಮಾತುಳರಿಪುವನಅನಳಬಾ |ಶ್ವೇತವಹನ ರಥಸಾರಥಿಬಾ |ಮಾತಿ ಶಿರ ಕಡಿದು ಬಾಹುಜರೊರಸಿದ ನಾಥಾ ಬಾ ||ಗೋಕುಲ ತ್ರಾತಾ ಬಾ ಲೋಕೈಕದಾತಾಬಾ |ವಸುದೇವ ಜಾತಾ ಬಾ ಸುಪ್ರಖ್ಯಾತಾ ಬಾಹಸಿಯಾ ಜಗುಲೀಗೇ 3

ವಾಮನ ಕೇಶವ ಹಯಮುಖ ಬಾ |ಭೀಮವಿನುತನಿಃಸೀಮಾ ಬಾ |ಕಾಮಿನಿಯರ ಚೈಲಹರಣ, ಋಷಿ, ರಣಭೀಮಾ ಬಾ ||ದಶರಥ ರಾಮಾ ಬಾ ಬಾಣವಿರಾಮಾ ಬಾ |ಅಜಮುಖ ನಾಮಾ ಬಾ ಕೃಷ್ಣಾ ಪ್ರೇಮಾ ಬಾಹಸಿಯಾ ಜಗುಲೀಗೇ 4

ಕಂದರ್ಪಜನಕ ನರಹರಿ ಬಾ |ಅಂದಮೃತವ ತಂದವನೇ ಬಾ |ಮಂದೇತರಮುದಘಟಜ ಪ್ರಮುಖ ಮುನಿವಂದ್ಯಾ ಬಾ ||ಕಸ್ತುರಿ ಛಂದಾ ಬಾ ದೇವ ಮುಕುಂದಾ ಬಾ |ದೇವಕಿ ಕಂದಾ ಬಾ ಸದ್ಗುಣ ವೃಂದಾ ಬಾಹಸಿಯಾ ಜಗುಲೀಗೆ 5

ಕ್ಷಿತಿಧರ ಜಿನಧರ ಸಖನೇ ಬಾ |ಅತುಳಮಹಿಮನೆ ಅಜಿತನೇ ಬಾ |ಸತಿಗಮರ ಸದನದಕುಸುಮತಂದಚ್ಯುತನೇ ಬಾ ||ಮೂರುತಿ ಸುತನೆ ಬಾ ಲೋಕ ವಿತತನೆ ಬಾ |ಪೂಜಿಗುಚಿತನೆ ಬಾ ರಕ್ಷಣರತನೇ ಬಾಹಸಿಯಾ ಜಗುಲೀಗೆ 6

ಪ್ರಾಣೇಶ ವಿಠ್ಠಲರಾಯಾ ಬಾ |ವೀಣಾಪಾಣೀ ಜನಕನೆ ಬಾ |ಮಾಣದೆಭಕ್ತರ ಪೊರವುತಿಹನೆ ಸತ್ರಾಣಾ ಬಾ ||ಸತ್ಯಾ ಪ್ರಾಣಾ ಬಾ ಶ್ರೀ ಪಾಠೀಣಾ ಬಾ |ನಿಜ ವಿಜ್ಞಾನಾ ಬಾನಿತ್ಯಕಲ್ಯಾಣಾ ಬಾಹಸಿಯಾ ಜಗುಲೀಗೆ 7
*******