kruti by bhupati vittalaru ( kakhandaki Ramacharyaru)
ತೋರಮ್ಮಯ್ಯ ಯತಿಕುಲ ಸಾರ್ವಭೌಮನ್ನ ಪ
ಮೂರವತಾರದ ಪುಣ್ಯರಾಶಿಯನು ತೂರಿಸುಜನರ ಪೊರೆವ ಉದಾರನ ಅ.ಪ
ಅಸುರ ಬಾಲನಂತೆ ಹರಿಯಲಿ ಅಸಮ ಭಕ್ತಿಯಂತೆಅಸುರಾರಿಯ ನರಸಿಂಹರೂಪವನು ಅಸುರತಾತನಿಗೆ ತೋರ್ದನಂತೆ 1
ಪರಮಹಂಸನಂತೆ ಪುರಂದರದಾಸರ ಗುರು ಅಂತೆಅರಸನ ರಕ್ಷಿಸಿ ಅರಸನಾಗಿ ಕ್ಷಣ ಉದ್ಗ್ರಂಥಗಳನು ರಚಿಸಿದನಂತೆ 2
ಕಡುಬಡತನವಂತೆ ಸುದಾಮನ ಮರಸಿ ಬಿಟ್ಟಿತಂತೆಸಡಗರದಿಂದ ಸನ್ಯಾಸಿಯಾಗಿ ದರ್ಮಸಾಮ್ರಾಜ್ಯವನಾಳಿದನಂತೆ3
ಕಾಮಧೇನುವಂತೆ ಕಲಿಯುಗ ಕಲ್ಪವೃಕ್ಷವಂತೆನೇಮದಿಂದ ಸೇವೆಯನು ಮಾಡಿದರೆ ಕಾ'ುತಾರ್ಥಗಳನೀಯ್ವನಂತೆ 4
ಸಾಲವಪುರದಂತೆ ಭಕ್ತರಿಗೊಲಿದು ಬಂದನಂತೆಮೂಲಸ್ಥಾನ ಮಂತ್ರಾಲಯವಂತೆ ಭೂಪತಿ'ಠಲನ ತೋರುವನಂತೆ 5
***