ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೋ ದಯದಿಂದೆನ್ನ ಕಾರುಣ್ಯ ನಿಧಿಯೇ | ಯದು ನಾಯಕನೇ ದೇವ ದೇವಾ ಪ
ಪುಷ್ಯರಾಗದಿ ನವರತ್ನ ಪದಕಧರ | ಘನಶ್ಯಾಮ ಉರಗಶಯನಾ | ಕಶ್ಯಪ ವಸಿಷ್ಠಾದಿ ಸ್ಮರಣೆ ಮಾಳ್ವವರಿಂಗೆ | ದೃಶ್ಯನಾಗಿಹ ಮುರಾರಿ ಶೌರಿ1
ನಂದಸುಕುಮಾರ ಸಿರಿನಾರಿಯ | ಸದ್ಬಕ್ತವೃಂದ ರಕ್ಷಕ ಭೂಧರಾ | ಇಂದಿರಾ ಭಾವನೆಯೂ ಪೂರಿತಿಕೇಳು | ಜಗವಂದ್ಯ ಮುಕುಂದ ಗರುಡರೂಢಾ2
ಚಕ್ರಕರ ಕಮಲಾಕ್ಷ ಚತುರಾಸ್ಯ ಜನಕ ಬಲಿ | ಚಕ್ರವರ್ತಿಗೆ ವರದನಾ | ಶಕ್ರನುತ ಮಹಿಪತಿ ಸ್ವಾಮಿ ಸುತ ಪ್ರೀಯಾ | ತ್ರಿವಿಕ್ರಮನೆ ಕೋಮಲಾಂಗಾ ರಂಗಾ 3
***