Showing posts with label ನೀ ಕಾಯ್ದರೆ ಕಾಯ್ದಾ ಬಗೆಯಲ್ಲದೆ prasannavenkata. Show all posts
Showing posts with label ನೀ ಕಾಯ್ದರೆ ಕಾಯ್ದಾ ಬಗೆಯಲ್ಲದೆ prasannavenkata. Show all posts

Wednesday, 13 November 2019

ನೀ ಕಾಯ್ದರೆ ಕಾಯ್ದಾ ಬಗೆಯಲ್ಲದೆ ankita prasannavenkata

by ಪ್ರಸನ್ನವೆಂಕಟದಾಸರು
ನೀ ಕಾಯ್ದರೆ ಕಾಯ್ದಾ ಬಗೆಯಲ್ಲದೆ ಬೇರೆಏಕಮತಿ ಎನ್ನೊಳಿಲ್ಲಶ್ರೀಕಾಂತ ಕರುಣಿ ನೀನಕ್ಲಿಷ್ಟ ಕಾಣಯ್ಯಬೇಕೆಂದು ಸಾಕುತಿಹೆ ಹರಿಯೆ ಪ.

ವೇದ ಶಾಸ್ತ್ರ ಪುರಾಣ ಸಾರಾರ್ಥ ತಿಳಿದರಿಯೆಸಾಧನ ಸುಮಾರ್ಗವರಿಯೆಆದರದಿ ಭಕುತಿ ಬಲಿದೊಮ್ಮೆ ಪೂಜಿಸಲರಿಯೆಮಾಧವಮುರಾರಿ ಕೃಷ್ಣಾ ತುಷ್ಟಾ1

ಮನ ಮರ್ಕಟವು ತನ್ನ ಮತಿಯಲ್ಲಿ ವಿಷಯ್ಯೆಂಬವನಕೆ ಮೆಚ್ಚಿದೆ ನೋಡಯ್ಯವನಚರತ್ವವನೀಗಿಕ್ಷಣವಾರೆ ತವಚರಣವನಜರಸವುಣ್ಣದಲ್ಲೈ ರಂಗಯ್ಯ 2

ಜನುಮ ಜನುಮದ ತಾಯಿ ತಂದೆಗುರುಬಂಧುನನ್ನನು ಗತಿಗಾಣಿಪ ದಾತನೆಎನ್ನಭವತಪ್ಪುಗಳನರಸದಿರು ಅರಸಿದರೆನಿನಗುಚಿತೆ ಪ್ರಸನ್ವೆಂಕಟೇಶ ಶ್ರೀಶ 3
*******