Showing posts with label ಎಂತಹ ಸಣ್ಣವನೆ ನಿನ್ನ ಮಗನಂತಹ purandara vittala. Show all posts
Showing posts with label ಎಂತಹ ಸಣ್ಣವನೆ ನಿನ್ನ ಮಗನಂತಹ purandara vittala. Show all posts

Wednesday 4 December 2019

ಎಂತಹ ಸಣ್ಣವನೆ ನಿನ್ನ ಮಗನಂತಹ purandara vittala

ಪುರಂದರದಾಸರು
ಎಂತಹ ಸಣ್ಣವನೆ-ನಿನ್ನ ಮಗನಂತಹರೆಲ್ಲಿಲ್ಲವೆ |ಹೊಂತಕಾರಿಬಲವಂತರಿಗಧಿಕನು ಪ

ತರಳನಂತಿಪ್ಪನು ತರಳೆಯರೊಡನಾಡುವ |ಕಿರುಬೆರಳುಗುರಲಿ ಗಿರಿಯನೆತ್ತಿದವ 1

ಕಾಳಿಯ ಸರ್ಪನ ಕಾಲಲ್ಲಿ ತುಳಿದವ |ಪಲಾಯನ ಮಾಡಿ ಕಾಲಯವನನ ಸುಟ್ಟ 2

ಕಿಚ್ಚು ಪಾನವ ಮಾಡಿ ಅಚ್ಚರಿ ತೋರಿದ |ರಚ್ಚೆಮಾಡುವಿರೆಂದು ಮುಚ್ಚಿಕೊಂಬುವಿಯಲ್ಲೆ3

ಬಾಯಿ ತೆರೆದನಲ್ಲೆ ನೀನಂಜುವಂದದಿ |ಆಯಮಳಾರ್ಜುನರಾಯಾಸ ಬಿಡಿಸಿದ 4

ದಿಟ್ಟತನದಿ ಮೊಲೆಗೊಟ್ಟವಳನು ಕೊಂದ |ಪುಟ್ಟ ಪುರಂದರವಿಠಲರಾಯನು 5
******