ಕಾಖಂಡಕಿ ಶ್ರೀ ಕೃಷ್ಣದಾಸರು
ಇದರೊಳಾರೈಯ್ಯ ನೀನು ಆತ್ಮಾ ವದಗಿ ನಾನೆಂದ ಹಂಕರಿಸಿ ಓಯಂದೆಂಬೆ ಪ
ನೋಡುವವನೊಬ್ಬ ತಾ ಕೇಳಲರಿಯನು ನುಡಿಯ ನೋಡಲರಿಯನು ಕೇಳುವವ ರೂಪವಾ ಆಡುವವ ನುಡಿಯೊಬ್ಬ ಪರಿಮಳಂಗಳ ತಿಳಿಯಾ ಅಡಲರುವಿಲ್ಲ ಘ್ರಾಣೇಂದ್ರಿಯವನೆ 1
ಕೊಡುವವಗೆ ನುಡಿಯಿಲ್ಲ ನಡೆವವಗೆ ಕರವಿಲ್ಲಾ ಬಿಡದೆ ಚೇಷ್ಟಿಸುವವಗ ರೂಪವಿಲ್ಲಾ ಒಡನಾರು ಮೂರು ಇಪ್ಪತ್ತೈದು ಕೂಟದಲಿ ಗಡಣದಿಂದಿಹ ಮನೆಗೆ ಕ್ಷೇತ್ರಜ್ಞನೊಬ್ಬನಿಹ 2
ತನ್ನ ನಿಜ ತಾನರಿಯ ಧನ್ಯ ತಾನೆಂತೆಂಬೊ ನಿನ್ನ ಬಲ್ಲವಿಕಿಗಿದು ನೋಡುಚಿತವೆ ಇನ್ಯಾರೆ ತಂದೆ ಮಹಿಪತಿ ಬೋಧವನು ಸವಿದು ಕಣ್ಣದರೆದಚ್ಯುತನ ನೆನೆದು ತಿಳಿಯೋ 3
***