Showing posts with label ಸುಮ್ಮನೆ ಹಟವ್ಯಾತಕಮ್ಮಾ ನಿನಗೆಮೊಮ್ಮುಣಿಸುವೆ aiholevenkatesha. Show all posts
Showing posts with label ಸುಮ್ಮನೆ ಹಟವ್ಯಾತಕಮ್ಮಾ ನಿನಗೆಮೊಮ್ಮುಣಿಸುವೆ aiholevenkatesha. Show all posts

Monday, 2 August 2021

ಸುಮ್ಮನೆ ಹಟವ್ಯಾತಕಮ್ಮಾ ನಿನಗೆಮೊಮ್ಮುಣಿಸುವೆ ankita aiholevenkatesha

ಸುಮ್ಮನೆ ಹಟವ್ಯಾತಕಮ್ಮಾ ನಿನಗೆಮೊಮ್ಮುಣಿಸುವೆ ನಾನು ಕೇಳೊ ಕೃಷ್ಣಯ್ಯ ಪ.


ಹಶಿವಿಯಾಗಿಹುದೇನೊ ನಿನಗೆ ಸಣ್ಣಹಸುಳರಂಜಿಪ ಬಾವಾ ಬಂದಾನೊ ಹೊರಗೆಮೊಸರಕಡೆದು ನಾ ಬೇಗ ಅಟ್ಟಿಹೊಸ ಬೆಣ್ಣೆ ಕೊಡುವೆನೊ ಕಂದಯ್ಯ ನಿನಗೆ 1

ಹಾಲು ಕುಡಿಸುವೆನೊ ನಾ ಒಬ್ಬಕೀಳು ತಿರುಕ ಬಾಗಿಲಲ್ಲಿ ಬಂದಿಹನೊಬಾಲಯ್ಯ ಅಳದೀರೊ ನೀನು ತನ್ನಜೋಳಗೆಯಲಿ ನಿನ್ನ ಕೊಂಡೊಯುವನು 2

ಅರಳೆಲೆ ಅಂದಿಗಿ ಇಡಿಸಿ ನಿನ್ನಪೆರನೂಸಲಲಿ ಕಸ್ತೂರಿಯ ಧರಿಸಿಪರಿಪರಿಯಲಿ ಸಿಂಗರಿಸಿ ಗೊಲ್ಲತರಳರೊಡನ ಆಡಕಳುವೆನೋ ಕರಸಿ 3

ಉಂಗುರು ಸರಪಳಿಯಿಟ್ಟು ಬಣ್ಣದಂಗಿಯ ತೊಡಿಸುವೆ ಕೇಳೋ ನಿ ಇಷ್ಟುರಂಗಯ್ಯ ಬಂತ್ಯಾಕೊ ಸಿಟ್ಟು ನಿನಗೆಮಂಗಳಾತ್ಮಕ ಏನೂ ಬೇಕೊ ಹೇಳಿಷ್ಟು 4

ಚೆನ್ನಾರ ಚೆಲುವಾ ಐಹೊಳೆಯ ಪ್ರಸನ್ನ ವತ್ಸಲ ಸಿರಿ ವೆಂಕಟರಾಯಾನಿನ್ನಾಟವಬಲೇಶ ನಿಚಯಾ ನೋಡಿಕರಂಣಿನೊಳಗಿಟ್ಟು ಹೀರುವರಯ್ಯಾ 5

ಪಾಪ ಕರ್ಮವ ಮಾಡಬ್ಯಾಡಾ ನರಕಕೂಪದೊಳಗೆ ಬಿದ್ದು ಹೊರಳಾಡಬ್ಯಾಡಕಾಕಪುರುಷರ ಸಂಗ ಕೇಡಾ ನಮ್ಮಶ್ರೀಪತಿಯ ಸ್ಮರಣೆ ಮಾಡದೆ ಬಿಡಬ್ಯಾಡಾ 6

ವಿಹೀತ ಕರ್ಮಗಳನ್ನು ಮಾಡೋ ನೀನುಅಹಿತಲ್ಪನೊಲಿಸಿ ಸದ್ಗತಿಯನ್ನು ಬೇಡೊಅಹಿತ ವಿಷಯ ಸುಖ ದೂಡೋ ಲೋಕ ದಹಿತನ ಸೇವೆಗೆಯುತಲಿ ಕೊಂಡಾಡೊ 7

ಸತ್ಯವಚನದಿಂದ ಬಾಳೊ ಬಲುಭಕ್ತಿಪೂರ್ವಕದಿ ಸಚ್ಛಾಸ್ತ್ರ ಕೇಳೊಚಿತ್ತದಿ ಶಾಂತಿಯ ತಾಳೊ ದುಷ್ಟ_ರುಕ್ತಿ ಕೇಳದೆ ನಿನ್ನ ಕಿವಿ ಮುಚ್ಚಿಕೊಳ್ಳೊ 8

ವೇದಬಾಹಿರನಾಗಬ್ಯಾಡಾ ಪರವಾದಿಮತಕೆ ನೀನು ಮನ ಮೆಚ್ಚಬ್ಯಾಡಾವೇದತೀರ್ಥರ ಗ್ರಂಥನೋಡಾ ಪಂಚಭೇದ ಪ್ರಪಂಚವು ನಿಜವೆನ್ನೊ ಮೂಢಾ 9

ಜೀವೇಶಾರೊಂದೆಂಬೊ ಹೊಲಿಯಾ ಪರಿಭಾವಿಸೂ ದ್ವಾಸುಪರ್ಣವೆಂಬೊ ಶ್ರುತಿಯಾಕಾವನಯ್ಯನೆ ಜಗದೊಡೆಯಾ ನಮ್ಮಜೀವಾತ್ಮ ಭೃತ್ಯನೊ ಖರಿಯಾ 10

ಅದ್ವೈತರೊಡನಾಟ ಬ್ಯಾಡ ನಮ್ಮಮಧ್ವಮತದ ಪದ್ಧತಿ ಬಿಡಬ್ಯಾಡಾಖದ್ಯೋತಸುತಗಂಜಬ್ಯಾಡಾ ನೀನುಪೊಂದು ಐಹೊಳಿಯ ವೆಂಕಟನಂಘ್ರಿಗಾಢಾ 11

****