Showing posts with label ಭಂಡನಾದೆನು ನಾನು ಸಂಸಾರದಿ purandara vittala. Show all posts
Showing posts with label ಭಂಡನಾದೆನು ನಾನು ಸಂಸಾರದಿ purandara vittala. Show all posts

Friday, 6 December 2019

ಭಂಡನಾದೆನು ನಾನು ಸಂಸಾರದಿ purandara vittala

ರಾಗ ಮುಖಾರಿ ಝಂಪೆತಾಳ

ಭಂಡನಾದೆನು ನಾನು ಸಂಸಾರದಿ
ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ||ಪ||

ಕಂಡಕಲ್ಲುಗಳಿಗೆ ಕೈಮುಗಿದು ಸಾಕಾದೆ
ದಿಂಡೆಕಾರರ ಮನೆಗೆ ಬಲು ತಿರುಗಿದೆ
ಶುಂಡಾಲನಂತೆನ್ನ ಮತಿ ಮಂದವಾಯಿತೈ
ಪುಂಡರೀಕಾಕ್ಷ ನೀ ಕರುಣಿಸೈ ಬೇಗ ||೧||

ನಾನಾ ವ್ರತಂಗಳನು ನಾ ಮಾಡಿ ಬಳಲಿದೆನು
ಏನಾದರೂ ಎನಗೆ ಫಲವಿಲ್ಲವು
ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ
ನೀನಾದರೂ ಕೃಪೆಯ ಇಡು ಬೇಗ ಹರಿಯೆ ||೨||

ಬುದ್ಧಿಹೀನರ ಮಾತು ಕೇಳಿ ನಾ ಮರುಳಾದೆ
ಶುದ್ಧಿಯಿಲ್ಲದೆ ಮನವು ಕೆಟ್ಟು ಹೋಯ್ತು
ಸಿದ್ಧನುತ ಸಿರಿಪುರಂದರವಿಠ್ಠಲ ತತ್ಪದ-
ಸಿದ್ಧಿಯನು ದಯಗೈದು ಉಳುಹು ನೀ ಎನ್ನ ||೩||
***

pallavi

bhaNDanAdenu nAnu samsAradi kaNDu kANada hAge irabahude hariye

caraNam 1

kaNDa kallugaLige kaimugidu balu sAkAde diNDegArara manege balu tirugide
suNDAlanantenna mati mandavAyitai puNDarIkAkSa nI karuNisai bEga

caraNam 2

nAnA vratangaLanu nA mADi baLalidenu EnAdaru balava kANadAde
A nADu I nADu sutti nA kangeTTe innAdaru krpeya mADayya hariye

caraNam 3

buddhi hInara mAtu kELi nA mOsa hOde shuddhiyillade manavu keTTu hOidu
madhavanuta shrI purandara viTTalane tatva siddiyanu dayaikidu uLuhu nI tande
***


ಪುರಂದರದಾಸರು
ಭಂಡನಾದೆನು ನಾನು ಸಂಸಾರದಿ |ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ಪ

ಕಂಡ ಕಲ್ಲುಗಳಿಂಗೆ ಕೈಮುಗಿದು ಸಾಕಾದೆ |ದಿಂಢೆಗಾರರ ಮನೆಗೆ ಬಲು ತಿರುಗಿದೆ ||ಶುಂಡಾಲನಂತೆನ್ನ ಮತಿ ಮಂದವಾಯಿತೈ |ಪುಂಡರೀಕಾಕ್ಷನೀ ಕರುಣಿಸೈ ಬೇಗ1

ನಾನಾವ್ರತಂಗಳನು ನಾ ಮಾಡಿ ಬಳಲಿದೆನು |ಏನಾದರೂ ಎನಗೆ ಫಲವಿಲ್ಲವು ||ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ |ನೀನಾದರೂ ಕೃಪೆಯನಿಡು ಬೇಗ ಹರಿಯೇ 2

ಬುದ್ಧಿಹೀನರ ಮಾತಕೇಳಿನಾ ಮರುಳಾದೆ |ಶುದ್ಧಿ ಇಲ್ಲದೆ ಮನವು ಕೆಟ್ಟು ಹೋಯ್ತು ||ಮಧ್ವನುತಸಿರಿಪುರಂದರವಿಠಲ ತತ್ವದ |ಸಿದ್ಧಿಯನು ದಯೆಗೆಯ್ದು ಉಳುಹು ನೀ ಎನ್ನ 3
********