Showing posts with label ವಾಸುದೇವನ ನೆನೆದು ನೀ ಸುಖಿಯಾಗು ಮನವೆ vijaya vittala. Show all posts
Showing posts with label ವಾಸುದೇವನ ನೆನೆದು ನೀ ಸುಖಿಯಾಗು ಮನವೆ vijaya vittala. Show all posts

Wednesday, 16 October 2019

ವಾಸುದೇವನ ನೆನೆದು ನೀ ಸುಖಿಯಾಗು ಮನವೆ ankita vijaya vittala

ವಿಜಯದಾಸ
ವಾಸುದೇವನ ನೆನೆದು ನೀ ಸುಖಿಯಾಗು ಮನವೆ |
ಈ ಶರೀರದ ಭ್ರಾಂತಿ ಇನ್ಯಾಕೆ ಮನವೆ ಪ

ಕಾಲುಗಳು ಕುಂದಿದವು ಕಣ್ಣದೃಷ್ಟಿ ಹಿಂಗಿದವು |
ಮೇಲೆ ಯೌವನ ಹೋಗಿ ಮುಪ್ಪಾಯಿತು ||
ಕಾಲ ಕರ್ಮಂಗಳು ಒದಗಿದಾಕ್ಷಣದಲಿ |
ಬೀಳುವ ತನುವಿನಾಶೆ ಇನ್ಯಾತಕೆಲೆ ಮರುಳೆ 1

ಧಾತುಗಳು ಹಿಂಗಿದವು ದಂತಗಳು ಸಡಲಿದವು |
ಕಾಂತೆಯರು ನೋಡಿ ವಾಕರಿಸುವರು ||
ಭ್ರಾಂತಿ ಇನ್ಯಾಕೆ ಬಯಲಾದ ದೇಹಕ್ಕೆ ಇನ್ನು |
ಅಂತರ ಮಾಡದೆ ಹರಿಯ ನೆನೆ ಮನವೆ 2

ನೀರ ಬೊಬ್ಬುಳಿಯಂತೆ ನಿಜವಲ್ಲ ದೇಹ |
ಧಾರಣಿಯನು ಮೆಚ್ಚಿ ಮರುಳಾಗಿ ಕೆಡದೆ ||
ಶ್ರೀರಮಣ ವಿಜಯವಿಠ್ಠಲರಾಯ |
ಸೋರಿ ಹೋಗುತಿದೆ ಸ್ವರ್ಗ ಸುಮ್ಮನಿರಬೇಡಾ 3
***

pallavi

vAsudEvana nenedu nI sukhiyAgu manavE I sharIrada bhrAnti in=yAke manavE

caraNam 1

kAlugaLu kundidavu kaNNa drSTi hingidavu mEle yauvana hOgi uppAyittu
kAla karmangaLu vodagi dAkSaNadali dILuva tanu vinAsha inyAtakele maruLe

caraNam 2

dhAtugaLu hingidavu dantagaLu saDilidavu kAneyaru nODi vAkarisuvaru
bhrAnti inyAke bayalAda dEhakke innu antara mADade hariye nene manamve

caraNam 3

nIra bobbuLiyante nijavalla dEha dhAriNiyanu mecci maruLAgi keDade
shrI ramaNa vijayaviThala rAya sOro hOgutide svarga summanira bEDA
***
check

pallavi

vAsudEvana nenedu sukhiyAgu manave I sharIrada bhrAnti inyAko manave

caraNam

nIra gobbaLiyante I dEha sthiravalla taraNi tana strIge maruLga bEDa
nIraja nAbha shrI purandara viTTalana (?) neneyabEko inyAko manave
***