Showing posts with label ಏಕೆ ಕಕುಲಾತಿಪಡುವೆ ಎಲೆ ಮನವೆ purandara vittala. Show all posts
Showing posts with label ಏಕೆ ಕಕುಲಾತಿಪಡುವೆ ಎಲೆ ಮನವೆ purandara vittala. Show all posts

Wednesday 4 December 2019

ಏಕೆ ಕಕುಲಾತಿಪಡುವೆ ಎಲೆ ಮನವೆ purandara vittala

ಪುರಂದರದಾಸರು
ಏಕೆ ಕಕುಲಾತಿಪಡುವೆ ಎಲೆ ಮನವೆ ಪ

ಲೋಕವನೆ ಸಲಹುವ ಶ್ರೀನಿವಾಸನು ನಮ್ಮ |ಸಾಕಲಾರದೆ ಬಿಡುವನೇ - ಮನವೆ ಅಪ

ಆನೆಗಳಿಗೆಯ್ದಾರು ಮಣವಿನಾಹಾರವನು ಅಲ್ಲಿ ತಂದಿತ್ತವರದಾರೊ |ಜೇನುನೊಣ ಮೊದಲಾದ ಕ್ರಿಮಿ - ಕೀಟಗಳಿಗೆಲ್ಲ |ತಾನುಣಿಸದಲೆ ಬಿಡುವನೇ - ಮರುಳೆ 1

ಕಲ್ಲಿನೊಳಗಿರುವ ಕಪ್ಪೆಗಳಿಗಾಹಾರವನುಅಲ್ಲಿ ತಂದಿತ್ತವರದಾರೊ |ಎಲ್ಲವನು ತೊರೆದು ಅರಣ್ಯ ಸೇರಿದ್ರ್ದವರ |ಅಲ್ಲಿ ನಡಸದೆ ಬಿಡುವನೇ - ಮರುಳೆ 2

ಅಡವಿಯೊಳಗೇ ಪುಟ್ಟುವಾ ಮೃಗಕುಲಕ್ಕೆಲ್ಲಒಡೆಯನಾರುಂಟು ಪೇಳೊ |ಗಿಡದಿಂದ ಗಿಡಕೆಹಾರುವ ಪಕ್ಷಿಗಳಿಗಲ್ಲಿ |ಪಡಿಯ ನಡೆಸದೆ ಬಿಡುವನೇ - ಮರುಳೆ 3

ಕಂಡಕಂಡವರ ಕಾಲಿಗೆ ಎರಗಿ ಎಲೆ ಮರುಳೆಮಂಡೆ ದಡ್ಡಾಯಿತಲ್ಲ |ಭಂಡ ಮನವೇ ನೀನು ಕಂಡವರಿಗೆರಗದಿರುಕೊಂಡಾಡಿ ಹರಿಯ ಭಜಿಸೋ - ಮರುಳೆ 4

ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನ್ನುಬೆಂಬಿಡದೆ ಸಲುಹುತಿಹನು |ನಂಬು ಶ್ರೀ ಪುರಂದರವಿಠಲನ ಪಾದವನುನಂಬಿದರೆ ಸಲಹದಲೆ ಬಿಡುವನೇ - ಮರುಳೆ 5
******