ನಡತೆ ನನ್ನದು ಕೇಳಿರಯ್ಯ ಪ
ಒಡೆಯ ವಲಿವ ಹ್ಯಾಗೆ ಪೇಳಿರಯ್ಯ ಅ.ಪ.
ಒಡವೆ ತರದಿಹನೆಂದು ಕೋಪ
ಮಡದಿನಟಿಸುತ ಹೆದರೀ
ಒಡನೆ ಸ್ನಾನವ ಮಾಡಿತಂದು
ಕೊಡುವ ಪ್ರಸನ್ನ ಗೈಯ್ಯಲವಳಾ ಆಹಾ
ಒಡಿಯ ದೇವಗೆ ಹರಕೆ ನಡಿಸಬೇಕೆನ್ನಲು
ಕೊಡಲಿ ಹರಿಯು ಭೂರಿ ನೋಡುವೆನೆಂತೆಂಬೆ 1
ಒರಿಸೆ ಸಾಲಿಗ್ರಾಮ ಗೃಹದಿ
ಅರಿವೆ ಹರಕು ಸಹ ಇಲ್ಲವೆನ್ನೇ
ತರುವೆನೆನುತ ತಿಂಗಳಾರು
ಅರಿತು ತಳ್ಳುವೆ ಕಾಲ ಬರಿದೇ ಆಹಾ
ತರಲು ಸೂಳೆಗೆ ಸೀರೆ ಭರದಿ ಕೂಡಿಯೆ ಅವಳ
ಪುರವ ಪೇಟೆಪೇಟೆಗಳೆಲ್ಲ ತಿರುಗಿ ತಿರುಗುವೆ ಮುದದೀ 2
ಹರಿಗೆ ದೀಪವ ಹಚ್ಚೆ ತೈಲ
ಇರದು ತಾರೆನೆ ಹಡೆದ ತಾಯಿ
ಬರಲಿ ಸಂಬಳ ತರುವೆ ಕೊಡುವಿ
ಉರಿವ ಕಾಟವನೆಂದು ನುಡಿವೆ ಆಹಾ
ಪರಮ ಸಂಭ್ರಮದಿಮದ ತಿಂಡಿ ಅಂಗಡಿಯಲಿ
ಹರಕು ಜಿಹ್ವೆಂiÀi ಚಪಲ ಪೂರ್ಣಮಾಡುವೆ ನಿರುತ 3
ವೃತ್ತಪತ್ರಿಕೆಯಲ್ಲಿ ಹೆಸರು
ಎತ್ತಿಹಾಕುವರೆನೆ ಒಡನೆ
ವಿತ್ತದಾನವಗೈವೆ ಬರಿ ಉ-
ನ್ಮತ್ತಕಾರ್ಯಕಾದರು ಸರಿಯೇ ಆಹಾ
ಉತ್ತಮಭಕ್ತರು ಅರಸುತ್ತ ಬರ್ಪುದ ಕಂಡು
ವತ್ತಿ ಬಾಗಿಲು ಕೊಂಡಿ ಸ್ವಸ್ಥವಿಲ್ಲೆಂಬೆ4
ಉಂಡು ತೇಗುವ ಧನಿಕ ಜನರ
ಕಂಡು ಕರೆಯುತ ಭಾರಿ ಊಟ
ತೊಂಡನಂದದಿ ನೀಡಿ ಮನದಿ
ಉಂಡು ಹರುಷವ ನೆನೆವೆ ಧನ್ಯ\ ಆಹಾ
ಕೆಂಡ ಬಿಸಿಲಲಿ ಬಡವ ಕಂಡು ಮಹಡಿಯ ಬರಲು
ಪಿಂಡ ಪಿಡಿಯನು ಹಾಕೆ ತಂಡುಲವಿಲ್ಲೆಂಬೆ5
ದಾನಗೈದರು ಒಮ್ಮಿಂದೊಮ್ಮೆ
ಮಾನಪಡೆಯಲು ಊರ ಒಳಗೆ
ನಾನೆಂಬ ಹಂಕಾರ ಬಿಡದೆ
ಶ್ರೀನಿಧಿ ಸ್ವಾಮಿತ್ವ ನೆನೆಯೆ ಆಹಾ
ಸ್ವಾನುಭವ ಕಾಣದೆಲೆ e್ಞÁನ ಭಾಸ್ಕರನಂತೆ ಪು-
ರಾಣಪೇಳುತ ನನ್ನ ಸಮಾನ ವಿಲ್ಲಂತೆಂಬೆ6
ನೂರಿತ್ತು ಸಂಬಳ ಹಿಂದೆ ಮನದಿ
ಊರಿತ್ತು ಹರಿಭಕ್ತಿ ಎಲ್ಲಿ ಈಗ
ನೂರ್ಹತ್ತು ಕೊಟ್ಟರು ದೇವ ಬೆ-
ನ್ಹತ್ತಿದೆ ತಾಪತ್ರಯ ಬಹಳ ಆಹಾ
ಭಾರತ ಮಿಗಿಲಿದೆ ಚರಿತೆ ಸಂಶಯವಿಲ್ಲ ಬೀರದಿರೆ
ಸಿರಿ ಕೃಷ್ಣವಿಠಲನೆ ದೃಷ್ಟಿ
ವಾರುಗಾಣೆನು ಕಾಣೆನು ಸತ್ಯ ಪೊರೆಯೋ ಶರಣೆಂತೆಂಬೆ7
****