Showing posts with label ಮುರಳಿ ಧ್ವನಿಯ ಮಾಡೋ ಮುರಾರೇ ಮುರುಳಿ ಧ್ವನಿಯ narahari P MURALI DHWANIYA MAADO MURAARE MURALI DHWANIYA. Show all posts
Showing posts with label ಮುರಳಿ ಧ್ವನಿಯ ಮಾಡೋ ಮುರಾರೇ ಮುರುಳಿ ಧ್ವನಿಯ narahari P MURALI DHWANIYA MAADO MURAARE MURALI DHWANIYA. Show all posts

Saturday, 11 December 2021

ಮುರಳಿ ಧ್ವನಿಯ ಮಾಡೋ ಮುರಾರೇ ಮುರುಳಿ ಧ್ವನಿಯ ankita narahari P MURALI DHWANIYA MAADO MURAARE MURALI DHWANIYA



kruti by pradyumna teertha ಪ್ರದ್ಯುಮ್ನತೀರ್ಥರು

ಮುರಳಿ ಧ್ವನಿಯ ಮಾಡೋ ಮುರಾರೇ ಪ


ಮುರುಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲ

ಹರುಷದಿಂದಲಿ ಭವ ಶರಧಿ ದಾಟುವರೈ ಅ.ಪ


ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟು

ಕಾಮಜನಕ ಗುಣಧಾಮ ಶ್ರೀ ಕೃಷ್ಣಾ 1


ಶ್ರೀ ವರ ನಿನ್ನಯ ಭ್ರೂ ವಿಲಾಸದಿಂದ

ಆವು ಮೆಚ್ಚುವಂತೆ ಸಾವಧಾನದಿಂದ 2

ಶ್ಯಾಮಸುಂದರ ಬಲು ಕೋಮಲ ಬೆರಳಲ್ಲಿ

ಪ್ರೇಮದಿಂದೊಪ್ಪುತ ಶ್ರೀ ಮನೋರಮನೆ 3


ಕೆಳ ಕೆಂದುಟಿಯಲ್ಲಿ ಕೊಳಲ ನಿಲ್ಲಿಸಿ ಬೇಗ

ನಳಿನಮುಖಿಯರನ್ನು ಒಲಿಸುತಲೊಮ್ಮೆ 4


ವನಜಸಂಭವಪಿತ ಶೀ ನರಹರಿಯೆ

ಕನಸಿನಂದದಿ ಜಗವರಿತು ನೆನೆಯುವಂತೆ 5

***