Showing posts with label ಏಳಯ್ಯ ಕಾರುಣ್ಯನಿಧಿ ಕಮಲದಳ ನೇತ್ರ devapura lakshmikanta. Show all posts
Showing posts with label ಏಳಯ್ಯ ಕಾರುಣ್ಯನಿಧಿ ಕಮಲದಳ ನೇತ್ರ devapura lakshmikanta. Show all posts

Monday, 2 August 2021

ಏಳಯ್ಯ ಕಾರುಣ್ಯನಿಧಿ ಕಮಲದಳ ನೇತ್ರ ankita devapura lakshmikanta

ಏಳಯ್ಯ ಕಾರುಣ್ಯನಿಧಿ ಕಮಲದಳ ನೇತ್ರ

ಏಳಯ್ಯ ಪರಮ ಪಾವನ ಮುನಿಜನ ಸ್ತೋತ್ರ ಪ


ಏಳಯ್ಯ ಕರಿರಾಜವರದ ವಿಜಯಮಿತ್ರ

ಏಳು ದೇವಕಿಯ ಪುತ್ರ ಅ.ಪ

ಏಳು ಹರಿರಥ ಶತಕೋಟಿ ಪ್ರಕಾಶನೇ

ಏಳೆರಡು ಲೋಕಗಳು ಉದರದಲಿ ಧರಿಸಿದನೇ

ಏಳು ಗೂಳಿಯಕಟ್ಟಿ ಕಾಂತೆಯನು ವರಿಸಿದನೇ

ಏಳು ಮುನಿನುತ ವಂದ್ಯನೇ ಸ್ವಾಮಿ 1


ಏಳು...(?)ಗಳೊಳು ಗಂಗೆಯನು ಪಾದದಲಿ ಪಡೆದೇ

ಏಳು ಪೆಡೆಯವನ ಮಡುಹಿನಲಿ ದೊತ್ತಳದುಳಿದೇ

ಏಳುತ್ತ ನಿಮ್ಮ ನಾಮವನೊಮ್ಮಗೆ ನಡದೇ

ಏಳು ಜನ್ಮದ ಭವಹರಾ ಸ್ವಾಮಿ 2

ಏಳು ಜಿಹ್ವೆಯನುಳ್ಳವನ ಮುಖವಾದೆ ಮ

ತ್ತೇಳ್ಮೂರು ಸೂಳಿನಲಿ ಕ್ಷತ್ರಿಯರ ಮರ್ದಿಸಿದೇ

ಏಳು ತಾಳೆಗಳನೊಂದಂಬಿನಲಿ ಛೇದಿಸಿದೇ

ಏಳು ಸಮರನ ಕೊಲಿಸಿದೇ ಸ್ವಾಮಿ 3

ಏಳು ಶರಧಿಯಲಿ ಪಾಲ್ಗಡಲಲ್ಲಿ ಪವಡಿಸಿದೆ

ಏಳು ವ್ಯೂಹದಲಿ ಪಾರ್ಥನ ನುಡಿಯ ಪಾಲಿಸಿದೆ

ಏಳು ದಿಕ್ಪಾಲಕರು ನಿನ್ನ ಪೊಗಳುತಲಿಹರೇ

ಏಳು ದ್ವೀಪಕ್ಕೊಡೆಯನೇ ಸ್ವಾಮಿ 4


ಏಳು ಶಕ್ತಿದೇವತೆಯರೂಳಿಗವ ಕೇಳಿ ಹರಿ

ದೇಳೆರಡು ಲೋಕ ಹರಿ ತಾನಲ್ಲದಿಲ್ಲೆಂಬ

ಏಳಿಗೆಯ ಹಮ್ಮಿನೊಳಿದ್ದ ದಶಕಂಧರನ

ಏಳಿಸಿದೆ ಸುರಲೋಕಕೇ ಸ್ವಾಮಿ 5


ಏಳು ಸ್ವರ ಮುಟ್ಟಿ ತುಂಬುರುನಾರದರು ಬಳಿ

ಕೇಳು ತಾಳಂಗಳಲಿ ನಿನ್ನ ಪೊಗಳುತಲಿಹರೇ

ಏಳುನಗರಕ್ಕಧಿಪವೆನಿಪ ಸುರಪುರವಾಸ

ಏಳು ಲಕ್ಷ್ಮೀನಿವಾಸ ಸ್ವಾಮಿ 6

****