Showing posts with label ಅನಂತ ಗಿರಿ ಯಾತ್ರೆ ಮಾಡಿ ಜನರು vijaya vittala. Show all posts
Showing posts with label ಅನಂತ ಗಿರಿ ಯಾತ್ರೆ ಮಾಡಿ ಜನರು vijaya vittala. Show all posts

Thursday, 17 October 2019

ಅನಂತ ಗಿರಿ ಯಾತ್ರೆ ಮಾಡಿ ಜನರು ankita vijaya vittala

ಅನಂತಗಿರಿ ಯಾತ್ರೆ ಮಾಡಿ ಜನರು
ಅನಂತ ಜನುಮದ ಪಾಪ ಸಂಹರವು ಪ

ಇಲ್ಲಿ ಕುರುರಾಯ ಜನ್ಮಾಂತರದು ಪಾಪ
ನಿಲ್ಲದೆ ಮಾಡಿದಾ ನಡತಿಯಿಂದಾ
ಎಲ್ಲ ಕಾಲದಲಿ ದರಿದ್ರನಾಗಿದ್ದು ಶ್ರೀ
ವಲ್ಲಭನ ಒಲಿಸಿ ಮುದಂಬರೀಷ ನೃಪನಾದಾ 1

ನೃಪತಿ ದುರ್ಮತಿಯಲಿ
ಮಂಡಲದೊಳಗಿರಲು ಸರ್ಪ ಕಚ್ಚಿ
ಕಂಡು ಗೃಧ್ರವು ಅವನ ಉಂಗುಷ್ಟ ಭವನಾಶಿ
ಕುಂಡದಲಿ ಬಿಸುಡೆ ದಶರಥ ಭೂಪತಿಯಾದಾ2

ಹೇಳಲಳವೆ ಇನ್ನು ಈ ಕ್ಷೇತ್ರದÀ ಮಹಿಮೆ
ಕೇಳಿದಾಕ್ಷಣ ಮುಕ್ತಿ ಸಿದ್ಧವಕ್ಕೂ
ಶ್ರೀಲೋಲ ನರಸಿಂಹ ವಿಜಯವಿಠ್ಠಲರೇಯೇನ
ವಾಲಗವ ಕೈಕೊಂಡ ಮನುಜಂಗೆ ಬಲು ಸಾಧ್ಯ 3
**********