ವಿಜಯದಾಸ
ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ |
ಕಿಂಕರರಿಗೊಲಿದ ನಿಃಶಂಕ ಬಾರೊ ಪ
ಇಂದಿರೆ ಕೂಡ |
ಚಂದದಿಂದಲೊಪ್ಪುತಿಹ ಇಂದುವದನಾ ||
ಮಂದರೋದ್ಧಾರನೆ ಮಹನಂದ ಮೂರುತಿ |
ವೃಂದಾರಕ ವಂದ್ಯಪಾಲ ವಂದಿಪೆ ನಿಂದು 1
ಲೌಕಿಕ ವಿಲಕ್ಷಣ ಅನೇಕ ಏಕಾ |
ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ ||
ಪ್ರಾಕೃತ ರಹಿತಗಾತ್ರ ಲೋಕಪಾವನ |
ಶೋಕ ಮೂಲನಾಶನ ಅಶೋಕ ಜನಕಾ 2
ಮಣಿ ಅಗಣಿತ ಬಂಧು |
ಆಗನಾಗಧಾರಕನೆ ನಾಗ ಭಂಜನಾ ||
ಆಕಾಶ ಗಂಗೆಯ ಅಂಗುಷ್ಟದಿ ಪೆತ್ತನೆ |
ಆಗಲೀಗಲೆನ್ನದಲೆ ಸಾಗಿ ವೇಗದಿ 3
ಅಂಗ ಅಂಗಿ ಭಾವದಿಂದ ಅಂಗದೊಳಿದ್ದು |
ಸಂಗಡ ತಿರುಗುವ ನೀಲಾಂಗ ನಿಃಸಂಗಾ ||
ಭೃಂಗ ಜಗದಂತ |
ರಂಗ ರಂಗರಾಜ ಸುಖಸಂಗ ನಿಸ್ಸಂಗಾ 4
ಆಪ್ತಕಾಮಿ ಅಮೃತಾಂಗ ಗುಪ್ತ ಮಹಿಮ |
ತಪ್ತ ಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ ||
ತೃಪ್ತ ತೃಣ ಬೊಮ್ಮದಿ ನಿರ್ಲಿಪ್ತ ವ್ಯಾಪ್ತಾ |
ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲಾ 5
ನಿರ್ದೋಷ ವಸ್ತುವಿನಿಂದ ನಿರ್ಧರ ಮಾಡೆ |
ಪೊಂದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳೂ ||
ಭದ್ರ ಫಲದಾಯಕ ಸಮುದ್ರಶಯನಾ |
ಮಧ್ಯಜೀವಿ ವಂದ್ಯ ಸುಪ್ರಸಿದ್ಧ ಮೋಹನ 6
ಜೀವಾಭಿಮಾನಿ ಗಿರೀಶ ದೇವ ದೇವೇಶಾ |
ಜೀವ ರಾಶಿಗಳ ಸ್ವಭಾವ ಪ್ರೇರಕಾ ||
ಜೀವನವಾಗಿ ನಮ್ಮನು ಕಾವುತಿಪ್ಪ |
ರಾಜೀವ ನಯನ ವಿಜಯವಿಠ್ಠಲ ಪೂರ್ಣಾ 7
*********
ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ |
ಕಿಂಕರರಿಗೊಲಿದ ನಿಃಶಂಕ ಬಾರೊ ಪ
ಇಂದಿರೆ ಕೂಡ |
ಚಂದದಿಂದಲೊಪ್ಪುತಿಹ ಇಂದುವದನಾ ||
ಮಂದರೋದ್ಧಾರನೆ ಮಹನಂದ ಮೂರುತಿ |
ವೃಂದಾರಕ ವಂದ್ಯಪಾಲ ವಂದಿಪೆ ನಿಂದು 1
ಲೌಕಿಕ ವಿಲಕ್ಷಣ ಅನೇಕ ಏಕಾ |
ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ ||
ಪ್ರಾಕೃತ ರಹಿತಗಾತ್ರ ಲೋಕಪಾವನ |
ಶೋಕ ಮೂಲನಾಶನ ಅಶೋಕ ಜನಕಾ 2
ಮಣಿ ಅಗಣಿತ ಬಂಧು |
ಆಗನಾಗಧಾರಕನೆ ನಾಗ ಭಂಜನಾ ||
ಆಕಾಶ ಗಂಗೆಯ ಅಂಗುಷ್ಟದಿ ಪೆತ್ತನೆ |
ಆಗಲೀಗಲೆನ್ನದಲೆ ಸಾಗಿ ವೇಗದಿ 3
ಅಂಗ ಅಂಗಿ ಭಾವದಿಂದ ಅಂಗದೊಳಿದ್ದು |
ಸಂಗಡ ತಿರುಗುವ ನೀಲಾಂಗ ನಿಃಸಂಗಾ ||
ಭೃಂಗ ಜಗದಂತ |
ರಂಗ ರಂಗರಾಜ ಸುಖಸಂಗ ನಿಸ್ಸಂಗಾ 4
ಆಪ್ತಕಾಮಿ ಅಮೃತಾಂಗ ಗುಪ್ತ ಮಹಿಮ |
ತಪ್ತ ಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ ||
ತೃಪ್ತ ತೃಣ ಬೊಮ್ಮದಿ ನಿರ್ಲಿಪ್ತ ವ್ಯಾಪ್ತಾ |
ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲಾ 5
ನಿರ್ದೋಷ ವಸ್ತುವಿನಿಂದ ನಿರ್ಧರ ಮಾಡೆ |
ಪೊಂದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳೂ ||
ಭದ್ರ ಫಲದಾಯಕ ಸಮುದ್ರಶಯನಾ |
ಮಧ್ಯಜೀವಿ ವಂದ್ಯ ಸುಪ್ರಸಿದ್ಧ ಮೋಹನ 6
ಜೀವಾಭಿಮಾನಿ ಗಿರೀಶ ದೇವ ದೇವೇಶಾ |
ಜೀವ ರಾಶಿಗಳ ಸ್ವಭಾವ ಪ್ರೇರಕಾ ||
ಜೀವನವಾಗಿ ನಮ್ಮನು ಕಾವುತಿಪ್ಪ |
ರಾಜೀವ ನಯನ ವಿಜಯವಿಠ್ಠಲ ಪೂರ್ಣಾ 7
*********