Showing posts with label ನಾರಸಿಂಹನೆಂಬೊ ದೇವನು ನಾರಸಿಂಹ purandara vittala NARASIMHANEMBO DEVANU NARASIMHA. Show all posts
Showing posts with label ನಾರಸಿಂಹನೆಂಬೊ ದೇವನು ನಾರಸಿಂಹ purandara vittala NARASIMHANEMBO DEVANU NARASIMHA. Show all posts

Tuesday 28 December 2021

ನಾರಸಿಂಹನೆಂಬೊ ದೇವನು ನಾರಸಿಂಹ purandara vittala NARASIMHANEMBO DEVANU NARASIMHA

CHAITRA SURESH RAO 2020


2nd Audio by Mrs. Nandini Sripad

ನಾರಸಿಂಹನೆಂಬೊ ದೇವನು ನಾರಸಿಂಹನೆಂಬೊ ದೇವನು।
ನಂಬಿದಂಥ ನರರಿಗೆಲ್ಲ ವರವಕೊಡುವನು ।ಪ।

ಆದಿಯಲ್ಲಿ ಲಕ್ಷ್ಮೀಸಹಿತದಿ ಮಲಗಿರಲು
ಬಂದರಾಗ ಸನತ್ಕುಮಾರರು
ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದ
ಮೂರು ಜನ್ಮದಲ್ಲಿ ನೀವು ಅಸುರರಾಗಿ ಪುಟ್ಟಿರೆಂದರು ।। ನಾರಸಿಂಹ ।।

ದ್ವಿತೀಯ ಗರ್ಭದಲ್ಲಿ ಜನಿಸಿದ ಹಿರಣ್ಯಾಕ್ಷ
ಹಿರಣ್ಯಕಶಿಪುರೆಂಬ ಭ್ರಾತೃರು
ಪೃಥ್ವಿಯನ್ನು ಮುಳುಗಿಸಿದ ಕಾರಣಾದಿ ಶ್ರೀಹರಿಯು
ತೃತೀಯ ರೂಪದಿಂದ ಖಳನ ಕೊಂದು ಧರೆಯನುಳಿಹಿದನು ।। ನಾರಸಿಂಹ ।।

ಅನುಜನಾದ ಹಿರಣ್ಯಾಕ್ಷನ ಮರಣವನ್ನು
ಕೇಳಿ ಆಗ ನಡೆದ ತಪಸ್ಸಿಗೆ
ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ
ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ।। ನಾರಸಿಂಹ ।।

ಇಂದ್ರಲೋಕ ಸೂರೆ ಮಾಡಿದ
ಮೂರು ಲೋಕಕೆ ಅಸುರ ತನ್ನ ಭಯವ ತೋರಿದ
ಗರ್ಭಿಣಿ ಕಯಾದುವನ್ನು ಬ್ರಹ್ಮಪುತ್ರ ಬಂದು ಆಗ
ದೈತ್ಯನಾದ ಹಿರಣ್ಯಕಶಿಪುವಿಗೆ ಒಪ್ಪಿಸಿದನು ।। ನಾರಸಿಂಹ ।।

ನವಮಾಸಗಳು ತುಂಬಲು ಕಯಾದು
ಆಗ ಪುತ್ರರತ್ನವನ್ನು ಪಡೆದಳು
ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ
ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು ಕರೆಸಿದನು ।। ನಾರಸಿಂಹ ।।

ಬಾಲಚಂದ್ರನಂತೆ ಹೊಳೆಯುತಾ ಇರುತಿರಲು
ಐದು ವರ್ಷ ತುಂಬಿತಾಗಲೆ
ಗುರುಗಳನ್ನು ಕರೆಸಿ ಬೇಗ ಸಕಲ ವಿದ್ಯೆ ಕಲಿಸಿರೆಂದು
ಗುರುಗಳಿಗೆ ಮಗನನ್ನು ಒಪ್ಪಿಸಿದ ದೈತ್ಯ ತಾನು ।। ನಾರಸಿಂಹ ।।

ಓಂ ನಮಃ ಶಿವಾಯ ಎನುತಲಿ
ಅಸುರ ತನ್ನ ಸುತನ ಬರೆದು ತೋರು ಎನಲು
ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು
ಎಡದ ತೊಡೆಯ ಮೇಲಿದ್ದ ಶಿಶುವ ಬಡಿದು ಧರೆಗೆ ನೂಕಿದನು ।। ನಾರಸಿಂಹ ।।

ಸುತ್ತ ಜನರ ಕರೆಸಿ ಬೇಗದಿ
ಅಸುರ ತನ್ನ ಸುತನ ಕೊಲ್ಲಿಸಬೇಕೆಂದಾಗ
ಅಟ್ಟ ಅಡವಿಯೊಳು ವಿಷವನಿಟ್ಟು ಭೋಜನಂಗಳ ಮಾಡಿ
ಹರಿಯ ಸ್ಮರಣೆ ಮಾತ್ರದಿಂದ ಭುಂಜಿ ತಿಳಿದ ಜಟ್ಟಿಹಾಂಗೆ ।। ನಾರಸಿಂಹ ।।

ಅಂಬುಧಿಯೊಳು ಮಗನ ಮಲಗಿಸಿ
ಮೇಲೆ ದೊಡ್ಡ ಬೆಟ್ಟವನಿಟ್ಟು ಬನ್ನಿರೋ
ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ
ಮರಣ ಇಲ್ಲದಹಾಂಗೆ ಮಾಡಿ ಮನೆಗೆ ಕೊಟ್ಟು ಕಳುಹಿದನು ।। ನಾರಸಿಂಹ ।।

ಬೆಟ್ಟದಿಂದ ಕಟ್ಟಿ ಉರುಳಿಸಿ ಅಸುರ
ತನ್ನ ಪಟ್ಟದಾನೆ ಕಾಲಲಿ ಮೆಟ್ಟಿಸಿ
ಹರಿವ ಒಲೆಯ ಮಾಡಿ ಸುಟ್ಟು ಹುಲಿಯ ಬೋನಿನಲ್ಲಿಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲು ಶಕ್ತನಲ್ಲದೆ ಪೋದನಂತೆ ।। ನಾರಸಿಂಹ ।।

ನಿನ್ನ ದೇವ ಇದ್ದ ಎಡೆಯನು ತೋರು
ಎನುತ ಪಿತನು ತನ್ನ ಸುತನ ಕೋರಲು
ಎನ್ನ ದೇವ ಇಲ್ಲದಂತ ಎಡೆಗಳುಂಟೆ ಲೋಕದಲ್ಲಿ
ಕಂಬದಲ್ಲೂ ಇರುವನೆಂದು ಕೈಯ ಮುಗಿದು ತೋರ್ದನಾಗೆ ।। ನಾರಸಿಂಹ ।।

ವರಕಂಬವನ್ನು ಒಡೆಯಲು ನರಹರಿಯು ಉಗ್ರಕೋಪವನ್ನು ತಾಳಿದ
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ
ಪಿಡಿದು ಒತ್ತಿ ಕರುಳ ಬಗೆದು
ಮಾಲೆ ಹಾಕಿ ಕಂದ ಭಕ್ತನಪ್ಪಿಕೊಂಡ ।। ನಾರಸಿಂಹ ।।

ಅಂತರಿಕ್ಷದಲಿ ಅಮರರು ನೋಡಿ ಆಗ
ಪುಷ್ಪವೃಷ್ಟಿಯನ್ನೆ ಕರೆದರು
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತಿರಲು
ಅಮರಪತಿಯರೆಲ್ಲರ ನೋಡಿ ಅಂಜಬೇಡೆಂದಭಯವಿತ್ತ ।। ನಾರಸಿಂಹ ।।

ಲಕ್ಷ್ಮೀನಾರಸಿಂಹ ಚರಿತೆಯ
ಉದಯಕಾಲ ಪಠಿಸುವಂತ ನರರಿಗೆಲ್ಲ ಪುತ್ರಸಂತಾನಂಗಳಿತ್ತು
ಮತ್ತೆ ಬೇಡಿದಹಾಂಗೆ ಕೊಟ್ಟು
ಭಕ್ತವತ್ಸಲ ಮುಕ್ತಿಕೊಡುವ ಪುರಂದರವಿಠಲರಾಯ ।। ನಾರಸಿಂಹ ।
***

pallavi

narasimhanembo dEvanu nambidantha nararigella varava koDuvanu

caraNam 1

Om namaha shivAya enutali asura tanna sutana baredu tOru embga narahariya
nAmavannu nagunagutale bareyutiralu eDadoDeya mEle shishuva dharege baDedu nUkidanu

caraNam 2

sattu janara karesi bEgadi asura tanna sutana kollisa bEkandAga aTTa aDaviyoL
viSavaniTTu bhOjanangaL mADi hariya smaraNe mADutale kunji tiLida jaTTi hAnge

caraNam 3

ambudiyoL magana malagisi mEle doDDa beTTavannu iTTu banniro hariya krpage
vashanAda taraLanendu varuNa dEva maraNa illada hAge mADi maneya taUUt kaLuhidanu

caraNam 4

beTTadainda kaTTI uruLisi asura tanna paTTadAne kAlisi meTTisi haralu maneya
mADi suTTu huliya bOninalli iTTu yatnavillade sutana kollalikke shaktanallade pOdanante

caraNam 5

ninna dEva idda eDeyanu tOru enuta pitanu tanna sutanu kOralu enna dEva
illadanda eDegaLuNTe lOkadalli kambadallu iruvanendu kaiya mugidu tOrdanAga

caraNam 6

vara khambavanu odeyalu narahariyu ugra kOpavannu tALida kaTakaDemba
dhvaniya mADi nagagaLinda piDidu otti karuLa bagidu mAle hAki kanda bhaktanappi koNDa

caraNam 7

antarikSadalli amararu nODi Aga puSpa vrSTiyanne kareyalu ajana paDeda
dEvi bandu toDeya mEle kuLidu koNDu amara patiyarella nODi anja beDenda bhaya koTTa

caraNam 8

lakSmI narasimha na cariteya udayakAla paDisuvanda nararigella putra santAnangaLittu
mattu bEDida hAge koTTu bhaktavatsala mukti koDuva purandara viTTalarAya
***


just scroll down for other devaranama 

ರಾಗ ಸುರಟಿ ಆದಿತಾಳ 

ನಾರಸಿಂಹನೆಂಬೊ ದೇವನು, ನಂಬಿದಂಥ
ನರರಿಗೆಲ್ಲ ವರವ ಕೊಡುವನು ||ಪ ||

ಓಂ ನಮಃ ಶಿವಾಯ ಎನುತಲಿ, ಅಸುರ ತನ್ನ
ಸುತನ ಬರೆದು ತೋರು ಎಂಬಾಗ
ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು
ಎಡತೊಡೆಯ ಮೇಲೆ ಶಿಶುವ ಧರೆಗೆ ಬಡೆದು ನೂಕಿದನು ||

ಸುತ್ತು ಜನರ ಕರೆಸಿ ಬೇಗದಿ, ಅಸುರ ತನ್ನ
ಸುತನ ಕೊಲ್ಲಿಸಬೇಕೆಂದಾಗ
ಅಟ್ಟ ಅಡವಿಯೊಳ್( ಅಡುಗೆಯೊಳ್?) ವಿಷವನಿಟ್ಟು ಭೋಜನಂಗಳ್ ಮಾಡಿ
ಹರಿಯ ಸ್ಮರಣೆ ಮಾಡುತಲೆ ಕುಂಜಿ ತಿಳಿದ ಜಟ್ಟಿ ಹಾಂಗೆ ||

ಅಂಬುಧಿಯೊಳ್ ಮಗನ ಮಲಗಿಸಿ, ಮೇಲೆ ದೊಡ್ಡ
ಬೆಟ್ಟವನ್ನು ಇಟ್ಟು ಬನ್ನಿರೊ
ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ
ಮರಣ ಇಲ್ಲದ ಹಾಗೆ ಮಾಡಿ ಮನೆಯ ತೊಟ್ಟು ಕಳುಹಿದನು ||

ಬೆಟ್ಟದಿಂದ ಕಟ್ಟಿ ಉರುಳಿಸಿ, ಅಸುರ ತನ್ನ
ಪಟ್ಟದಾನೆ ಕಾಲಿಲಿ ಮೆಟ್ಟಿಸಿ
ಹರಲು ಮನೆಯ ಮಾಡಿ ಸುಟ್ಟು ಹುಲಿಯ ಬೋನಿನಲ್ಲಿ ಇಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲಿಕ್ಕೆ ಶಕ್ತನಲ್ಲದೆ ಪೋದನಂತೆ ||

ನಿನ್ನ ದೇವ ಇದ್ದ ಎಡೆಯನು, ತೋರು ಎನುತ
ಪಿತನು ತನ್ನ ಸುತನ ಕೋರಲು
ಎನ್ನ ದೇವ ಇಲ್ಲದಂಥ ಎಡೆಗಳುಂತೆ ಲೋಕದಲಿ
ಕಂಭದಲ್ಲು ಇರುವನೆಂದು ಕೈಯ ಮುಗಿದು ತೋರ್ದನಾಗ ||

ವರ ಕಂಭವನು ಒದೆಯಲು, ನರಹರಿಯು
ಉಗ್ರ ಕೋಪವನ್ನು ತಾಳಿ
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ ಪಿಡಿದು ಒತ್ತಿ
ಕರುಳ ಬಗಿದು ಮಾಲೆ ಹಾಕಿ ಕಂಡ ಭಕ್ತನಪ್ಪಿಕೊಂಡ ||

ಅಂತರಿಕ್ಷದಲ್ಲಿ ಅಮರರು ನೋಡಿ ಆಗ
ಪುಷ್ಪ ವೃಷ್ಟಿಯನ್ನೆ ಕರೆಯಲು
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತುಕೊಂಡು
ಅಮರಪತಿಯರೆಲ್ಲ ನೋಡಿ ಅಂಜಬೇಡೆಂಬಭಯ ಕೊಟ್ಟ ||

ಲಕ್ಷ್ಮೀನಾರಸಿಂಹನ ಚರಿತೆಯ ಉದಯಕಾಲ
ಪಠಿಸುವಂಥ ನರರಿಗೆಲ್ಲ
ಪುತ್ರ ಸಂತಾನಂಗಳಿತ್ತು ಮತ್ತು ಬೇಡಿದ್ಹಾಗೆ ಕೊಟ್ಟು
ಭಕ್ತವತ್ಸಲ ಮುಕ್ತಿ ಕೊಡುವ ಪುರಂದರವಿಠಲರಾಯ ||

***

Narasimha nembo Devanu Nambidanta Nararigella Varava Koduvanu ||

Aadiyalli Lakshmi Sahitadi Malagiralu
Bandaraaga Sanatkumaararu
Aaga Dvaarapaalakaru Tadeyalaaga Kopadinda
Mooru Janmadalli Neevu Asuraraagi Puttirendu ||1||

Ditiya Gargbadalli Janisida
hiranyaakshya hiranyakashipu remba Bhraatruru
Pruthviyannu Mulugisida Kaaranaadi Shree Haariyu Thruthiya
Roopadinda Khalana Kondu Dhareyanulihidanu ||2||

Anujanaada hiranyaakshana Maranavannu
Keli Aaga Nadeda Tapasige
Hariya Meley Sittininda Ugra Tapassannu Maadi
Bramhaninda Varagalannu Padedukondu Bandanaaga ||3||

Indraloka Soore Maadida Mooru Lokake
Asura Tanna Bhayava Torida
Garbhini Kayaaduvannu Bramhaputra Bandu Aaga
Dyityaraaja hiranyakashipuvige Voppisidanu ||4||

Navamaasagalu Tumbalu Kayaadu Aaga
Putra Ratnavannu Padedalu
Naamakaranavannu Maadi Viprarannu Karesi Beyga
Dyitya Tanna Sutanige Prahalada nendu Karesidanu ||5||

Baalachandranante Holeyutaa Irutiralu
Iyidu Varsha Tumbitaagale
Gurugallannu Karesi Bega Sakala Vidyey Kalisirendu
Gurugalige Magannannu Voppisida Dyitya Taanu ||6||

Om Namaha Shivaaya Yenutali Asura Tanna
Sutana Baredu Toru Yennalu
Narahariya Naamavannu Nagunagutale Bareyutiralu
Yedade Todeya Meylidda Shishuva Badidu Dharegey Nookidanu ||7||

Sutta Janara Karesi Begadi Asura Tanna Sutana Kolisi Beku Yendaaga
Atta Adagiyolu Vishava Nittu Bhojanagala Maadi
Hariya Smaraney Maatradinda Bhunji Tilida Jattihaange ||8||

Ambudhiyolu Magana Malagisi Meyley Dodda
Bettavannu Ittu Banniro
Hariya Krupege Vashanaada Taralanendu Varunadeva
Marana Illadhaange Maadi Manege Kottu Kaluhidenu     ||9||

Bettadinda Katti Urulisi Asura Tanna
Pattadaane Kaalali Meyttisi
Urriyuva Voleya Maadi Suttu Huliya Boninalli Ittu
Yatnavillade Sutana Kollalu Shaktanallade Podanante ||10||

Ninna Deva Idda Yedeyanu Toru Yenuta
Pitanu Tanna Sutana Koralu
Yenna Deva Illadanta Yedegaluntee Lokadalli
Kambhadalu Iruvanendu Kyiya Mugidi Tordhanaaga ||11||

Narahari Narahari baa baa
Narahari Narahari baa baa

Varakambhavannu Vodeyalu Narahariyu
Ugra Kopavannu Taalida

(Bagavatham Narasimha avatara slokam)
***


Narasimha nembo Devanu Nambidanta Nararigella Varava Koduvanu ||

Aadiyalli Lakshmi Sahitadi Malagiralu Bandaraaga Sanatkumaararu
Aaga Dvaarapaalakaru Tadeyalaaga Kopadinda
Mooru Janmadalli Neevu Asuraraagi Puttirendu ||1||

Ditiya Gargbadalli Janisida hiranyaakshya hiranyakashipu remba Bhraatruru
Pruthviyannu Mulugisida Kaaranaadi Shree Haariyu Thruthiya
Roopadinda Khalana Kondu Dhareyanulihidanu ||2||

Anujanaada hiranyaakshana Maranavannu Keli Aaga Nadeda Tapasige
Hariya Meley Sittininda Ugra Tapassannu Maadi
Bramhaninda Varagalannu Padedukondu Bandanaaga ||3||

Indraloka Soore Maadida Mooru Lokake Asura Tanna Bhayava Torida
Garbhini Kayaaduvannu Bramhaputra Bandu Aaga
Dyityaraaja hiranyakashipuvige Voppisidanu ||4||

Navamaasagalu Tumbalu Kayaadu Aaga Putra Ratnavannu Padedalu
Naamakaranavannu Maadi Viprarannu Karesi Beyga
Dyitya Tanna Sutanige Prahalada nendu Karesidanu ||5||

Baalachandranante Holeyutaa Irutiralu Iyidu Varsha Tumbitaagale
Gurugallannu Karesi Bega Sakala Vidyey Kalisirendu
Gurugalige Magannannu Voppisida Dyitya Taanu ||6||

Om Namaha Shivaaya Yenutali Asura Tanna Sutana Baredu Toru Yennalu
Narahariya Naamavannu Nagunagutale Bareyutiralu
Yedade Todeya Meylidda Shishuva Badidu Dharegey Nookidanu ||7||

Sutta Janara Karesi Begadi Asura Tanna Sutana Kolisi Beku Yendaaga
Atta Adagiyolu Vishava Nittu Bhojanagala Maadi
Hariya Smaraney Maatradinda Bhunji Tilida Jattihaange ||8||

Ambudhiyolu Magana Malagisi Meyley Dodda Bettavannu Ittu Banniro
Hariya Krupege Vashanaada Taralanendu Varunadeva
Marana Illadhaange Maadi Manege Kottu Kaluhidenu     ||9||

Bettadinda Katti Urulisi Asura Tanna Pattadaane Kaalali Meyttisi
Urriyuva Voleya Maadi Suttu Huliya Boninalli Ittu
Yatnavillade Sutana Kollalu Shaktanallade Podanante ||10||

Ninna Deva Idda Yedeyanu Toru Yenuta Pitanu Tanna Sutana Koralu
Yenna Deva Illadanta Yedegaluntee Lokadalli
Kambhadalu Iruvanendu Kyiya Mugidi Tordhanaaga ||11||

Narahari Narahari baa baa
Narahari Narahari baa baa
Varakambhavannu Vodeyalu Narahariyu UGRA Kopavannu Taalida

Satyam Vidhaatum Nijabhrutyabhaashitam Vyaptim Cha
Bhooteshvakhileshu Chaatmanaha|
Adyasyataatyadhbhutaroopamudhvahan Stambhe Sabhaayaam
Na Mrugam Na Maanusham||

Katakatemba Dhvaniya Maadi Nakhagalinda Pididu Votti
Karula Bagedu Maale Haaki Kandha Bhaktanappikonda ||12||

Antarikshadalli Amaararu Nodi Aaga Pushpavrushtiyanne Karedaru
Ajana Padeda Devi^ Bandu Todeya Meyley Kulitiralu
Amarapatiyarella Nodi Anja Bedembhaya Kotta ||13||

Lakshmi Narashima chariteya Udaya Kaala Patisuvanta Nararigella
Putrasantaanangalittu Mattey Bedidhaange Kottu
Bhaktavatsala Mukuti Koduva Purandara Vittala Raya ||13||
***



ನಾರಸಿಂಹ ನೆಂಬೋ  ದೇವನು 
ನಂಬಿದಂತ  ನರರಿಗೆಲ್ಲ ವರವ ಕೊಡುವನು ।।

ಆದಿಯಲ್ಲಿ  ಲಕ್ಷ್ಮಿ ಸಹಿತದಿ  ಮಲಗಿರಲು  ಬಂದರಾಗ ಸನತ್ ಕುಮಾರರು
ಆಗ ದ್ವಾರಪಾಲಕರು  ತಡೆಯಲಾಗ ಕೋಪದಿಂದ
ಮೂರು ಜನ್ಮದಲ್ಲಿ ನೀವು  ಅಸುರರಾಗಿ ಪುಟ್ಟಿರೆಂದು ।

ನಾರಸಿಂಹ  ಲಕ್ಷ್ಮೀ  ನಾರಸಿಂಹ ಕರಿಗಿರಿ  ನಾರಸಿಂಹ  ನೆಂಬೋ  ದೇವನು  ನಂಬಿದಂತ ನರರಿಗೆಲ್ಲ      ವರವ ಕೊಡುವನು ।।೧।।

ದಿತಿಯ ಗರ್ಭದಲ್ಲಿ  ಜನಿಸಿದ  ಹಿರಣ್ಯಾಕ್ಷ  ಹಿರಣ್ಯಕಶಿಪುರೆಂಬ  ಭ್ರಾತೃರು
ಪೃಥ್ವಿಯನ್ನು  ಮುಳುಗಿಸಿದ ಕಾರಣಾದಿ ಶ್ರೀಹರಿಯು
ತೃತೀಯ ರೂಪದಿಂದ  ಖಳನ  ಕೊಂದು ಧರೆಯನುಳುಹಿದೆನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ನೀರಾ  ನಾರಸಿಂಹ  ನೆಂಬೋ ದೇವನು ನಂಬಿದಂತ ನರರಿಗೆಲ್ಲ    ವರವ ಕೊಡುವನು ।।೨।।

ಅನುಜನಾದ ಹಿರಣ್ಯಾಕ್ಷನ  ಮರಣವನ್ನು ಕೇಳಿ ಆಗ ನಡೆದ ತಪಸ್ಸಿಗೆ
ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ
ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಝರಣಿ  ನಾರಸಿಂಹ ನೆಂಬೋ   ದೇವನು  ನಂಬಿದಂತ ನರರಿಗೆಲ್ಲ     ವರವ ಕೊಡುವನು ।।೩।।

ಇಂದ್ರ ಲೋಕ  ಸೂರೆ ಮಾಡಿದ  ಮೂರು ಲೋಕಕೆ ಅಸುರ  ತನ್ನ ಭಯವ ತೋರಿದ ಗರ್ಭಿಣಿ ಕಯಾಧುವನ್ನು  ಬ್ರಹ್ಮಪುತ್ರ  ಬಂದು ಆಗ
ದೈತ್ಯರಾಜ ಹಿರಣ್ಯಕಶಿಪುವಿಗೆ  ಒಪ್ಪಿಸಿದನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಮುಳಬಾಗಿಲು ನಾರಸಿಂಹ ನೆಂಬೋ  ದೇವನು  ನಂಬಿದಂತ       ನರರಿಗೆಲ್ಲ ವರವ ಕೊಡುವನು ।।೪।।

ನವಮಾಸಗಳು ತುಂಬಲು  ಕಯಾಧು ಆಗ ಪುತ್ರರತ್ನವನ್ನು ಪಡೆದಳು
ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ
ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು  ಕರೆಸಿದನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ಚಿಂತಲವಾಡಿ  ನಾರಸಿಂಹ ನೆಂಬೋ  ದೇವನು  ನಂಬಿದಂತ    ನರರಿಗೆಲ್ಲ ವರವ ಕೊಡುವನು।।೫।।

ಬಾಲಚಂದ್ರನಂತೆ ಬೆಳೆಯುತಾ  ಇರುತಿರಲು ಐದು ವರ್ಷ ತುಂಬಿತಾಗಲೇ
ಗುರುಗಳನ್ನು ಕರೆಸಿ ಬೇಗ  ಸಕಲ ವಿದ್ಯೆ ಕಲಿಸಿರೆಂದು
ಗುರುಗಳಿಗೆ  ಮಗನನ್ನು ಒಪ್ಪಿಸಿದ   ದೈತ್ಯ ತಾನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಸೀಬಿ  ನಾರಸಿಂಹ ನೆಂಬೋ  ದೇವನು  ನಂಬಿದಂತ ನರರಿಗೆಲ್ಲ    ವರವ ಕೊಡುವನು।।೬।।

ಓಂ ನಮಃ ಶಿವಾಯ ಎನುತಲಿ  ಅಸುರ ತನ್ನ  ಸುತನ ಬರೆದು ತೋರು ಎನ್ನಲು ನರಹರಿಯ ನಾಮವನ್ನು  ನಗುನಗುತಲಿ ಬರೆಯುತಿರಲು
ಶ್ರವಣಂ  ಕೀರ್ತನಂ  ವಿಷ್ಣೋಃ  ಸ್ಮರಣಂ ಪಾದ ಸೇವನಂ
ಅರ್ಚನಂ ವಂದನಂ ದಾಸ್ಯಂ ಸತ್ಯಂ ಆತ್ಮ ನಿವೇದನಂ
ನರಹರಿಯ ನಾಮವನ್ನು ನಗುನಗುತಲಿ ಬರೆಯುತಿರಲು
ಓಂ ನಮೋ ನಾರಾಯಣಾಯ ! ಓಂ ನಮೋ ನಾರಾಯಣಾಯ !
ಓಂ ನಮೋ ನಾರಾಯಣಾಯ ! ಓಂ ನಮೋ ನಾರಾಯಣಾಯ !
ನರಹರಿಯ ನಾಮವನ್ನು ನಗುನಗುತಲಿ ಬರೆಯುತಿರಲು
ಎಡದ ತೊಡೆಯ ಮೇಲಿದ್ದ ಶಿಶುವ ಬಡಿದು ಧರೆಗೆ ನೂಕಿದನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ನಾಮಕಲ್ ನಾರಸಿಂಹ ನೆಂಬೋ  ದೇವನು  ನಂಬಿದಂತ       ನರರಿಗೆಲ್ಲ  ವರವ ಕೊಡುವನು ।।೭।।

ಸುತ್ತ ಜನರ ಕರೆಸಿ ಬೇಗದಿ ಅಸುರ ತನ್ನ ಸುತನ ಕೊಲಿಸಬೇಕು  ಎಂದಾಗ
ಅಟ್ಟ  ಅಡವಿಯೊಳು  ವಿಷವಹಿಟ್ಟು   ಭೋಜನಂಗಳ  ಮಾಡಿ
ಹರಿಯ ಸ್ಮರಣೆ ಮಾತ್ರದಿಂದ ಭುಂಜಿ ತಿಳಿದ ಜಟ್ಟಿಹಾಂಗೆ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಪಾನಕ ನಾರಸಿಂಹ ನೆಂಬೋ  ದೇವನು  ನಂಬಿದಂತ      ನರರಿಗೆಲ್ಲ  ವರವ ಕೊಡುವನು ।।೮।।

ಅಂಬುಧಿಯೋಳು ಮಗನ ಮಲಗಿಸಿ  ಮೇಲೆ ದೊಡ್ಡ ಬೆಟ್ಟವನ್ನು  ಇಟ್ಟು  ಬನ್ನಿರೋ ಹರಿಯ ಕೃಪೆಗೆ ವಶನಾದ  ತರಳನೆಂದು ವರುಣದೇವ
ಮರಣ ಇಲ್ಲದಹಾಂಗೆ  ಮಾಡಿ ಮನೆಗೆ  ಕೊಟ್ಟು ಕಳುಹಿಸಿದನು ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ಜ್ವಾಲ ನಾರಸಿಂಹ ನೆಂಬೋ  ದೇವನು  ನಂಬಿದಂತ       ನರರಿಗೆಲ್ಲ  ವರವ ಕೊಡುವನು ।।೯।।

ಬೆಟ್ಟದಿಂದ ಕಟ್ಟಿ ಉರುಳಿಸಿ  ಅಸುರ ತನ್ನ ಪಟ್ಟದಾನೆ  ಕಾಲಲಿ ಮೆಟ್ಟಿಸಿ
ಹರಿವ  ಒಲೆಯ ಮಾಡಿ ಹುಲಿಯ ಬೋನಿನಲ್ಲಿ ನಿಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲು  ಶಕ್ತನಲ್ಲದೆ ಪೋದನಂತೆ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಕಾರ್ಪರ ನಾರಸಿಂಹ ನೆಂಬೋ  ದೇವನು  ನಂಬಿದಂತ    ನರರಿಗೆಲ್ಲ  ವರವ ಕೊಡುವನು ।।೧೦।।

ನಿನ್ನ ದೇವ ಇದ್ದ ಎಡೆಯನು  ತೋರು ಎನುತ ಪಿತನು  ತನ್ನ ಸುತನ ಕೋರಲು
ವಾಸವ್ಯದಿ  ಸರ್ವತ್ರ ತಸ್ಮಾಸ್ತಮ್  ದೇನ  ದೃಷ್ಯತೇ ಹಾ ಹರಿ ಸರ್ವತ್ರ ಸಾ ಸರ್ವತ್ರ ಸ್ಥಂಭೇನ ದೃಶ್ಯತೇ । ಸ್ಥಂಭೇನ ದೃಶ್ಯತೇ । ಸ್ಥಂಭೇನ ದೃಶ್ಯತೇ ।
ಎನ್ನ ದೇವ ಇಲ್ಲದಂತ ಎಡೆಗಳುಂಟೆ  ಲೋಕದಲ್ಲಿ
ಕಂಭದಲ್ಲು ಇರುವನೆಂದು ಕೈಯ ಮುಗಿದು ತೋರ್ದನಾಗ  ನರಹರಿ ।
ನರಹರಿ । ನರಹರಿ  ಬಾ ಬಾ ಬಾ ಬಾ ಬಾ ಬಾ .........

ವರಕಂಭವನ್ನು  ಒದೆಯಲು ನರಹರಿಯು ಉಗ್ರಕೋಪವನ್ನು  ತಾಳಿದ
ಸತ್ಯಂ ವಿಧಾತಂ ನಿಜ ಭೃತ್ಯ ವಾಸಿತಮ್  ವ್ಯಾಪ್ತಿಂಚ  ಭೂತೇ
ಸ್ವಖಿಲೇಶು  ತಾತ್ಮನಃ ಅದೃಷ್ಯತಾ ಅತ್ಯಧ್ಬುತರೂಪಮುತ್ತಃ
ಸ್ತಂಭೇ ಸಭಾಯ ನ ಮೃದಂ  ನ ಮಾನುಷಂ  ನ ಮೃಡಂ ನ ಮಾನುಷಂ
ಕಟಕಟೆಂಬ  ಧ್ವನಿಯ ಮಾಡಿ  ನಖಗಳಿಂದ  ಪಿಡಿದು ಒತ್ತಿ
ಕರುಳ ಬಗೆದು ಮಾಲೆ ಹಾಕಿ ಕಂಡ ಭಕ್ತನಪ್ಪಿಕೊಂಡ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ಭದ್ರ ನಾರಸಿಂಹ ನೆಂಬೋ  ದೇವನು  ನಂಬಿದಂತ      ನರರಿಗೆಲ್ಲ  ವರವ ಕೊಡುವನು ।।೧೧।।

ಅಂತರಿಕ್ಷದಲ್ಲಿ ಅಮರರು  ನೋಡಿ ಆಗ ಪುಷ್ಪವೃಷ್ಟಿಯನ್ನೇ  ಕರೆದರು
ಅಜನ ಪಡೆದ ದೇವಿ ಬಂದು  ತೊಡೆಯ ಮೇಲೆ ಕುಳುತಿರಲು
ಅಮರಪತಿಯರೆಲ್ಲರ ನೋಡಿ ಅಂಜಬೇಡಂದಭಯವಿತ್ತ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ    ತೊರೆವೆಯ ನಾರಸಿಂಹ ನೆಂಬೋ  ದೇವನು  ನಂಬಿದಂತ     ನರರಿಗೆಲ್ಲ  ವರವ ಕೊಡುವನು ।।೧೨।।


ಲಕ್ಷ್ಮೀ  ನಾರಸಿಂಹ ಚರಿತೆಯೇ ಉದಯ ಕಾಲದಲ್ಲಿ  ಪಠಿಸುವಂತ ನರರಿಗೆಲ್ಲ
ಪುತ್ರಸಂತಾನಂಗಳಿತ್ತು  ಮತ್ತೆ ಬೇಡಿದಹಾಂಗೆ  ಕೊಟ್ಟು
ಭಕ್ತವತ್ಸಲ ಮುಕ್ತಿ ಕೊಡುವ  ಪುರಂದರ ವಿಠ್ಠಲರಾಯ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ ಅಹೋಬಿಲ  ನಾರಸಿಂಹ ನೆಂಬೋ  ದೇವನು  ನಂಬಿದಂತ    ನರರಿಗೆಲ್ಲ  ವರವ ಕೊಡುವನು ।।೧೩।।

ನಾರಸಿಂಹ ಲಕ್ಷ್ಮೀ  ನಾರಸಿಂಹ ನೆಂಬೋ  ದೇವನು  ನಂಬಿದಂತ  ನರರಿಗೆಲ್ಲ           ವರವ ಕೊಡುವನು........ ।।

ನಾರಸಿಂಹ ಲಕ್ಷ್ಮೀ  ನಾರಸಿಂಹ  ಕರಿಗಿರಿ ನಾರಸಿಂಹ,ನೀರಾ  ನಾರಸಿಂಹ, ಕಾರ್ಪರ ನಾರಸಿಂಹ, ತೊರವೆಯ ನಾರಸಿಂಹ, ಅಹೋಬಿಲ  ನಾರಸಿಂಹ 
*****

just scroll down for other devaranama