Showing posts with label ಕರುಣದಿಂದ ಕಾಯೊ ಎನ್ನನು ಉರಗಾದ್ರಿವಾಸ ವಿಠ್ಠಲ ದೇವ kamalanabha vittala. Show all posts
Showing posts with label ಕರುಣದಿಂದ ಕಾಯೊ ಎನ್ನನು ಉರಗಾದ್ರಿವಾಸ ವಿಠ್ಠಲ ದೇವ kamalanabha vittala. Show all posts

Thursday, 5 August 2021

ಕರುಣದಿಂದ ಕಾಯೊ ಎನ್ನನು ಉರಗಾದ್ರಿವಾಸ ವಿಠ್ಠಲ ದೇವ ankita kamalanabha vittala

 ..

kruti by Nidaguruki Jeevubai  - this is the first song

ಕರುಣದಿಂದ ಕಾಯೊ ಎನ್ನನು
ಉರಗಾದ್ರಿವಾಸ ವಿಠ್ಠಲ ದೇವ ಪ

ತಂದೆ ವೆಂಕಟೇಶ ವಿಠ್ಠಲ
ಬಂದು ಎನ್ನ ಹೃದಯದಲ್ಲಿ
ನಿಂದು ನಾಮ ನುಡಿಸಿ ಪೇಳ್ವ
ಚಂದ ಮನಕೆ ತಂದು ಕೊಡುತ 1

ವಾಸುದೇವ ನಿನ್ನ ಮಹಿಮೆ
ತೋಷದಿಂದ ಭಜಿಸುವುದಕೆ
ದೋಷಗುಣಗಳನ್ನೆ ಕಳೆದು-
ಲ್ಲಾಸ ಮನಕೆ ಒದಗುವಂತೆ 2

ಮಂದಮತಿಗಳಾದ ಜನಕೆ
ಮುಂದೆ ಗತಿಯ ಪಥವ ತೋರಿ
ಬಂಧನಂಗಳನ್ನೆ ತರಿದು
ತಂದೆ ಕಾಯೊ ಇಂದಿರೇಶ 3

ಬೊಕ್ಕಸದ ದ್ರವ್ಯ ಜನರು
ವೆಚ್ಚಮಾಡುತಿರುಹ ತೆರದಿ
ಮೆಚ್ಚಿ ಬಂದ ಜನರ ಮನದ
ಇಚ್ಛೆ ಪೂರ್ತಿಗೊಳಿಸಿ ಪೊರೆದೆ 4
ಅಂತರಂಗದೊಳಗೆ ನಿನ್ನ
ಚಿಂತೆ ಮರೆಯದಂತೆ ಕೊಟ್ಟು
ಅಂತರಾತ್ಮ ಕಮಲನಾಭ
ವಿಠ್ಠಲ ಸಂತೈಸಿ ಕಾಯೊ5
***

ಜೀವೂಬಾಯಿ ಅವರು ರಚಿಸಿದ ಮೊತ್ತ ಮೊದಲ ಹಾಡು.

ಟ ಅಸ್ವತಂತ್ರ ಜೀವಾಂತರ್ಗತ ಶ್ರಿ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಉರಗಾದ್ರಿವಾಸ ವಿಠ್ಠಲಾಭಿನ್ನ ಶ್ರಿ ಗುರುವಾಸುದೇವ ವಿಠ್ಠಲಾ ಭಿನ್ನ ಶ್ರೀ ತಂದೆ ವೆಂಕಟೇಶ ವಿಠ್ಠಲಾತ್ಮಕ ಶ್ರೀ ಕಮಲನಾಭ ವಿಠ್ಠಲಾಯ:ನಮ:
***