..
ಚೆಲ್ಲುತ ಹೆಜ್ಜೆನಿಕ್ಕುತ ನಮ್ಮ ಚಲುವ
ರಂಗನ ಮೇಲೆ ಚಲುವೆಯರು ಬುಕ್ಕಿಟ್ಟು ಪ.
ಸುಂದರೆಯರು ಇಂದಿರೇಶಗೆ ಎರಗಿ
ಬಂದು ಪ್ರಾರ್ಥನೆಮಾಡಿ ಆನಂದವ ಸೂಸುತ 1
ತೋಳ ಬಂದಿಗಿಯಲಿ ವ್ಯಾಲಾಶಯನಗ
ಒಪ್ಪ ಹೇಳಿ ಪ್ರಾರ್ಥನೆಮಾಡಿ ಬಹಳ ಉತ್ಸುಕದಿಂದ 2
ಮುಗುಳು ನಗೆಯ ನಕ್ಕುನಲ್ಲೆಯರು ಕೃಷ್ಣಗೆ
ಹಸ್ತಗಳ ಮುಗಿದು ಮಾತುಗಳನ್ನಾಡಿದರು3
ಹರದಿ ರುಕ್ಮಿಣಿ ಭಾವೆಗೆ ಎರಗಿ ದ್ರೌಪತಿ ಭದ್ರಾ
ಆದರದಿ ಮಾಡಿದರು ಪ್ರಾರ್ಥನೆ ಕರಗಳ ಮುಗಿದು 4
ಚಲುವ ರಾಮೇಶನ ವಲ್ಲಭೆಯರಿಗೆ ಭದ್ರಾಅಲ್ಲೆ ಪ್ರಾರ್ಥನೆ ಮಾಡಿ ಎಲ್ಲರ ಕರೆಯಲು 5
****