Showing posts with label ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ purandara vittala HARIYENDU MANADALI MAREDOMME NENEDARE. Show all posts
Showing posts with label ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ purandara vittala HARIYENDU MANADALI MAREDOMME NENEDARE. Show all posts

Tuesday, 7 December 2021

ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ purandara vittala HARIYENDU MANADALI MAREDOMME NENEDARE



ಪುರಂದರದಾಸರು

ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ
ದುರಿತ ಪರ್ವತಗಳ ಖಂಡಿಪುದು ವಜ್ರದಂತೆ ||ಪ||

ಮೇರುಸುವರ್ಣ ದಾನವ ಮಾಡಲು ನಿತ್ಯ
ನೂರು ಕನ್ಯಾದಾನವ ಮಾಡಲು
ಧಾರಿಣಿಯೆಲ್ಲವ ಧಾರೆಯನೆರೆಯಲು
ನಾರಾಯಣ ಸ್ಮರಣೆಗೆ ಸರಿಯಹುದೆ ||

ಹತ್ತುಲಕ್ಷ ಗೋದಾನ ಮಾಡಲು ಪುಣ್ಯ-
ವ್ರತಗಳ ಅನುದಿನ ಆಚರಿಸಲು
ಶತಕೋಟಿ ಯಜ್ಞವ ಮಾಡಲು ಲಕ್ಷ್ಮೀ-
ಪತಿ ನಾಮಸ್ಮರಣೆಗೆ ಸರಿಯೆನ್ನಬಹುದೆ ||

ಗಂಗೆ ಕಾಳಿಂದಿ ಗೋದಾವರಿ ಕಾವೇರಿ
ತುಂಗಭದ್ರೆಯಲಿ ಸ್ನಾನವ ಮಾಡಲು
ಮಂಗಳ ಮೂರುತಿ ಪುರಂದರವಿಟ್ಠಲ
ರಂಗನ ಸ್ಮರಣೆಗೆ ಸರಿಯೆನ್ನಬಹುದೆ ||
***
ರಾಗ ಬಿಲಹರಿ ತ್ರಿಪುಟ ತಾಳ (raga tala may differ in audio)

ಹರಿಯೆಂದು ಮನದಲ್ಲಿ ಮರೆದೊಮ್ಮೆ ನೆನೆದರೆ |
ದುರಿತಪರ್ವತ ಖಂಡಿಪುದು ವಜ್ರದಂತೆ ಪ.

ಮೇರು ಸುವರ್ಣದಾನವ ಮಾಡಲು ಪುಣ್ಯ |ನೂರು ಕನ್ಯಾದಾನವ ಮಾಡಲು ||ಧಾರಿಣಿಯೆಲ್ಲವ ಧಾರೆಯ ನೆರೆಯಲು ||ನಾರಾಯಣ ಸ್ಮರಣೆಗೆ ಸರಿಬಹುದೆ ? 1

ಹತ್ತುಲಕ್ಷ ಗೋದಾನ ಮಾಡಲು ಪುಣ್ಯ - |ವ್ರತಗಳಅನುದಿನ ಆಚರಿಸಲು ||ಶತಕೋಟಿ ಯಜÕನ ಮಾಡಲು ಲಕ್ಷ್ಮೀ - |ಪತಿನಾಮ ಸ್ಮರಣೆಗೆ ಸರಿಯೆನ್ನಬಹುದೆ 2

ಗಂಗೆ ಕಾಳಿಂದಿ ಗೋದಾವರಿ ಕಾವೇರಿ |ತುಂಗಭದ್ರೆಯಲಿ ಸ್ನಾನವ ಮಾಡೆ ||ಮಂಗಳಮೂರುತಿ ಪುರಂದರವಿಠಲ |ರಂಗನ ಸ್ಮರಣೆಗೆ ಸರಿಯೆನ್ನಬಹುದೆ ? 3
**********