ಬಿದ್ದೆ ನಿಮ್ಮಯ ಪಾದದಲ್ಲಿ ನಾ ಪ
ಮಧ್ವರಾಯರ ಮನದಲ್ಲಿ ಇದ್ದು ವಲಿವ ವೇದವ್ಯಾಸ ಅ.ಪ.
ವೇದ ಓದದ ಶುದ್ಧ ಕಳ್ಳನಾ ಮೆದ್ದು ಮೆಲ್ಲುತ ವೃದ್ಧನಾದೆ ಭಲ್
ಗದ್ದ ದಾಸಗೆ ಕರುಣದಿ ತೋರಿ ಉದ್ಧರಿಸುವ ಬಗೆ ಬಲ್ಲೀ 1
ಅನ್ಯದೇವರ ನಾ ನೊಲ್ಲೆ ನಿನ್ನ ಪಾದವ ಬಿಡಲೊಲ್ಲೆ
ಘನ್ನಕರುಣಿ ನೀನು ಬಲ್ಲೆ ನಿನ್ನ ಬಿಡಲು ಜಗಕಲ್ಲೇ 2
ಉತ್ತಮೋತ್ತಮ ದೇವ ಸತ್ಯ ಭೃತ್ಯಜೀವನು ಎಂಬೆನಿತ್ಯ
ಭಕ್ತ ಪ್ರಥಮ ಪ್ರಾಣನೀನೇ ಮುಕ್ತಿನಿನ್ನಾಧೀನವೇನೇ 3
ಇಂದಿರಾದೇವಿ ನಿನ್ನ ರಾಣಿ ಕಂದರು ವಿಧಿ ಪರಿವಾರ
ಎಂದೆಂದಿಗೂ ಭಿನ್ನರೇನೇ ಎಂದೆಂದು ಅಧೀನರೇನೇ 4
ಶ್ರೀಕೃಷ್ಣವಿಠಲ ಏಕ ಸಕಲ ದೋಷ ವಿದೂರ
ಸಕಲ ಸದ್ಗುಣ ಪೂರ್ಣ ಹಾಗೆ ಅಕಟ
ಪೊರೆಯೋ ಎಂದು ಕೂಗಿ 5
****