Showing posts with label ವಿಜಯರಾಯರ ಚರಣ ನಿಜವಾಗಿ ನಂಬಲುಅಜನ ಪಿತನು ತಾನೆ ಒಲಿವಾ mohana vittala vijaya dasa stutih. Show all posts
Showing posts with label ವಿಜಯರಾಯರ ಚರಣ ನಿಜವಾಗಿ ನಂಬಲುಅಜನ ಪಿತನು ತಾನೆ ಒಲಿವಾ mohana vittala vijaya dasa stutih. Show all posts

Sunday, 1 August 2021

ವಿಜಯರಾಯರ ಚರಣ ನಿಜವಾಗಿ ನಂಬಲುಅಜನ ಪಿತನು ತಾನೆ ಒಲಿವಾ ankita mohana vittala vijaya dasa stutih

 ..


ವಿಜಯರಾಯರ ಚರಣ ನಿಜವಾಗಿ ನಂಬಲುಅಜನ ಪಿತನು ತಾನೆ ಒಲಿವಾ ಪ


ದ್ವಿಜಕೇತನ ಗುಣವ್ರಜವ ಕೊಂಡಾಡುವಾಸುಜನ ಮಂದಾರನೀತ - ಪ್ರಖ್ಯಾತ ಅ.ಪ.


ವಿ ಎಂದು ನುಡಿಯಲು ವಿಷಯ ಲಂಪಟ ದೂರಜ ಎಂದು ನುಡಿಯಲು ಜನನ ಹಾನಿಯ ಎಂದು ಕೊಂಡಾಡೆ ಯಮಭಟರು ಓಡುವರುರಾಯ ಎಂದೆನಲು ಹರಿಕಾವಾ - ವರವೀವಾ 1

ಇವರ ಸ್ಮರಣೆಯೆ ಸ್ನಾನ ಇವರ ಸ್ಮರಣೆಯೆ ಧ್ಯಾನಇವರ ಸ್ಮರಣೆಯೆ ಅಮೃತಪಾನಇವರ ಸ್ಮರಣೆಯ ಮಾಡೆ ಯುವತಿಗಕ್ಷಯವಿತ್ತತ್ರಿವಿಕ್ರಮನು ಮುಂದೆ ನಲಿವಾ - ಒಲಿವಾ 2

ವಾರಣಾಸಿಯ ಯಾತ್ರೆ ಮೂರು ಬಾರಿ ಮಾಡಿಮಾರಪಿತನೊಲುಮೆಯನು ಪಡೆದುಮೂರವತಾರದಾ ಮಧ್ವಮುನಿರಾಯರಾಚಾರು ಚರಣವನು ಭಜಿಪಾ - ಮುನಿಪಾ 3

ಪುರಂದರದಾಸರಾ ಪರಮಾನುಗ್ರಹ ಪಾತ್ರಗುರು ವಿಜಯರಾಯನೀತಾಸಿರಿ ವಿಜಯ ವಿಠಲನ್ನ ಶ್ರೀನಿವಾಸಾರ್ಯರುಹರಿಯಾಜ್ಞೆಯಿಂದ ಕೊಟ್ಟರೂ - ದಿಟ್ಟರೂ 4

ದಾನಧರ್ಮದಿ ಮಹಾ ಔದಾರ್ಯಗುಣದ ಶೌರ್ಯಶ್ರೀನಿವಾಸನ ಪ್ರೇಮಕುಮಾರಾಮಾನವೀ ಸೀಮೆ ಚೀಕನಪರಿ ನಿವಾಸ ಮೋ-ಹನ ವಿಠಲನ್ನ ನಿಜದಾಸಾ - ಉಲ್ಲಾಸಾ 5

***