ದಾತ ಅವಗುಣ ಧೂತ ಅವಗುಣ ಧೂತ ದೇವಾಧಿದೇವ ಶ್ರೀದೇವ ಅವಧೂತ pa
ಜೀವದ ಜೀವ ದೇವರ ದೇವ ವಾಸುದೇವ 1
ಪ್ರಾಣಕ ಪ್ರಿಯ ಮುನಿಜನಾಶ್ರಯ ಙÁ್ಞನಿಗಳಿಗೆ ಸಾಹ್ಯ ಅನುಕೂಲ ನಮ್ಮಯ್ಯ 2
ಅನಾಥ ಬಂಧು ಘನಕೃಪಾಸಿಂಧು ಅನುದಿನ ದೊರೆವ ದೀನನಾಥನೆಂದೆಂದು 3
ಮನದ ಮಾಣಿಕ ಅಣುರೇಣುಕ ವ್ಯಾಪಕ ಅನಂತಕೋಟಿ ಬ್ರಹ್ಮಾಂಡ ನಾಯಕ 4
ಪರಮ ಉದಾರ ಕರುಣಾಸಾಗರ ತರಳ ಮಹಿಪತಿಸ್ವಾಮಿ ಇಹಪರ ಸಹಕಾರ 5
****