ಶ್ರೀ ಜಯವಿಠಲ ದಾಸರ ಕೃತಿ
( ಮೈಸೂರು ಶ್ರೀನಿವಾಸದಾಸರು )
ಇಂಥಾ ಪ್ರಭುವ ಕಾಣೆನೋ । ಈ ಜಗದೊಳ - ।
ಗಿಂಥಾ ಪ್ರಭುವ ಕಾಣೆನೋ ॥ ಪ ॥
( ಮೈಸೂರು ಶ್ರೀನಿವಾಸದಾಸರು )
ಇಂಥಾ ಪ್ರಭುವ ಕಾಣೆನೋ । ಈ ಜಗದೊಳ - ।
ಗಿಂಥಾ ಪ್ರಭುವ ಕಾಣೆನೋ ॥ ಪ ॥
ಇಂಥಾ ಪ್ರಭುವ ಕಾಣೆ ಶಾಂತಮೂರುತಿ ಜಗ - ।
ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ॥ ಅ ಪ ॥
ಬೇಡಿದಿಷ್ಟವ ಕೊಡುವ । ಭಕ್ತರ ತಪ್ಪು ।
ನೋಡದೆ ಬಂದು ಪೊರೆವ ।
ಗಾಡಿಕಾರನು ಗರುಡರೂಢ ಗುಣವಂತ ಮಹ ।
ಪ್ರೌಢ ಪ್ರತಾಪನು ಗೂಢದಿಂ ಸಂಚರಿಪ ॥
ಪಾಡಿ ಪೊಗಳಿ ಕೊಂಡಾಡುವವರ ಮುಂ -
ದಾಡುತಲಿಪ್ಪನು ಕಾಡಿನಲ್ಲಿದ್ದರು
ಕೇಡಿಗನೇ ನಾಡಾಳುಗಳಂದದಿ
ಈಡುಂಟೇನೋ ವೇಂಕಟನಿಗೆ ॥ 1 ॥
ನಿಗಮತತಿಗಳರಿಯದ । ನೀರಜಭವಾ -
ದ್ಯಗಣಿತ ಸುರರು ಕಾಣದ ।
ಜಗದೊಡೆಯನು ಭಕ್ತಾದಿಗಳಿಗೊಲಿದು ತ್ರಿಸ್ಥಾ - ।
ನಗಳ ತ್ಯಜಿಸಿ ಕಲಿಯುಗದಿ ಭೂಮಿಗೆ ಬಂದು ॥
ಅಗಣಿತ ಸುಗುಣಾಭರಣನು ಪನ್ನಗ
ನಗದೊಳು ಸೇವಾದಿಗಳನು ಕೊಳ್ಳುತ
ಬಗೆಬಗೆ ಹರುಷವ ಮಿಗೆಮಿಗೆ ತೋರುತ
ನಗೆಮೊಗ ಚೆನ್ನಿಗ ನಿಂತಹನಮ್ಮ ॥ 2 ॥
ಭಾರ್ಗವಿ ಭೂಮಿವಲ್ಲಭ । ಭವದೂರ ಭಕ್ತ ।
ವರ್ಗಕ್ಕೆ ಇವ ಸುಲಭ ।
ನಿರ್ಗುಣ ಅವಿಕಾರ ಸ್ವರ್ಗದೈಶ್ವರ್ಯಕ್ಕಿಂತ ಅ -
ನರ್ಘ್ಯ ಸಂಪದವವೀವ ದೀರ್ಘಾಯುವಂತನಾದ ॥
ಭಾರ್ಗವರಾಮ ನೃಪರ್ಗಳನೆಲ್ಲ ರ -
ಣಾಗ್ರದಿ ಜೈಸಿದ ಉಗ್ರಪ್ರತಾಪ ಸು -
ರಾಗ್ರಗಣ್ಯ ಸದ್ವಿಗ್ರಹ ಶ್ರೀಮದ -
ನುಗ್ರಹ ಮೌಡ್ಯಘದುರ್ಗವ ಕಳೆವ ॥ 3 ॥
ನಿರ್ದುಃಖಾನಂದ ಭರಿತಾ । ನಿರವದ್ಯ ಸುಖ ।
ಆರ್ದ್ರ ಹೃದಯ ತೋರುತ ।
ನಿದ್ರೆಯೊಳಗಿದ್ದವಗುಪದ್ರ ಕೊಡಿಸಿ ।
ಕ್ಷುದ್ರ ದೈತ್ಯನ ಬಗೆದು ಸುಭದ್ರ ಜಗಕಿತ್ತ ॥
ನಿರ್ದಯನಲ್ಲ ಸಮುದ್ರಶಯನ ಗೋ -
ವರ್ಧನಧರ ಖಳಮರ್ದನ ಯದುಕುಲ
ವರ್ಧನ ಸಿರಿಕುಚಮರ್ದನ ಲಕ್ಷ್ಮೀ ಜ -
ನಾರ್ದನ ವರ ಶೇಷಾದ್ರಿನಿವಾಸ ॥ 4 ॥
ಸರಸಿಜಭವ ಮನಸಿಜ । ಈರ್ವರು ಸುತರು ।
ಸುರತರಂಗಿಣಿ ತನುಜೆ ।
ಪುರವೇ ವೈಕುಂಠ ಇಂದ್ರಾದ್ಯಮರರೇ ಕಿಂಕರರು
ಗರುಡ ತುರಗ ಉರಗಪರ್ಯಂಕ ನಿಷ್ಕಳಂಕ ॥
ಸರಿದೊರೆಗಳ ನಾನರಿಯೆನು ವೇಂಕಟ
ಗಿರಿಯೊಳು ಮೆರೆಯುವ ಕರುಣೆಗಳರಸನೆ
ಮರೆಯದೆ ಪೊರೆವನು ಶರಣಾಗತರನು
ಮರುತಾಂತರ್ಗತ ಸಿರಿ ಜಯವಿಠ್ಠಲನು ॥ 5 ॥
****
ರಾಗ ಮೋಹನ ಆದಿತಾಳ (raga tala may differ in audio)
Intha prabhuva kaneno I jagadolagi0tha prabhuva kaneno
Intha prabhuva kane shanta muruti jagadanta ranganu lakshmikanta sarvantaryami
Bedida varava koduva bhaktara tappu nodade bandu poreva gadikaranu garudaruda
Gunavanta maha praudha pratapi jagadi gudadim sancharipa
Padi pogali kondaduvara mundadulippanu kadolagiddaru
Kedigane nadadigalandadi idunte I venkatage||1||
Nigama tatigalariyada niraja bhavadya ganita suraru kanada jagadodeyanu
Bhaktarugaligolidu tristhana tyajisi kaliyugadi bhumige bandu
Aganita sugunarnava shri hariye jagadolu sevadigalanu kolutiha
Aghahara mokshadigala kodutiha nagemogadali chenniga nintihano||2||
Bhargavi bhumivallabha bhavadura bhaktavargake iva sulabha nirguna nirvikara
Svargadwaishvaryadinda anarghya padavaniva dirghayuvamta nita
Bhargavarama nrupargalanella ranargadi jayisida ugrapratapi
Agraganya sadvigraha shrimad anugraha maduta durguna kaleva||3||
Nirdukanandabharita niravadyasukhake ardyahrudaya toruta nidreyoliddavagupadravabadisi
Daitya kshudravankolisi subhadra jagake itta
Nirdayanalla samudrashayana govardhana giriyanu uddharisida
Yaduvardhana danuja vimardana laksmijanardhana varashesadrinivasa||4||
Sarasijasana manmatha Irvaru sutaru suratarangini tanuje purave vaikuntha indradya
Maratu kimkararu garudavahana uraga pariyanka nishkalanka
Saridoregala nanariyenu venkatagiriyali irutiha karunigalarasane
Mareyade poreyuva sharanagataranu marutantargata sirivijayaviththala||5||
***
pallavi
inthA prabhuva kANeno I jagadoLaginthA prabhuva kANeno
anupallavi
inthA prabhuva kANe shAnta mUruti jagadantaranganu lakSmIkAnta sarvAntaryAmi
caraNam 1
bEDida varava koDuva bhaktara tappu nODade bandu poreva gADikAranu garuDA
rUDha guNavanta mahA prauDha pratApa jagadi gUDadi sancaripa
pADi hogaLi koNDADuvara mundADutalippanu kADoLagiddaru
kEDiganE nADADigaLandadi IDunTEnO I venkaTage
caraNam 2
nigama tatigaLariyada nIraja bhavAdya gaNita suraru kANada jagadoDeyanu bhaktA
digaLigolidu tristhA nagaLa tyajisi kali yugadi bhUmige bandu
agaNita suguNArNava shrI hariyE jagadoLu sEvAdigaLanu koLutiha
aghahara mOkSAdigaLa koDutiha nagemogada cenniganiMtihano
caraNam 3
bhArgava bhUmivallabha bhavadUra bhaktavargake sulabha nirguNa nirvikAra
svargadaishvaryakintA narghya sampadavIva dIrghAyuvantanIta
bhArgavarAma nrupargaLanellaraNAgradi jayisida ugrapratApa su
rAgragaNya sadvigraha shrImad anugraha mADuta durguNa kaLeva
caraNam 4
nirduhkhAnanda bharitA nirvANa sukhake Ardrahrudaya tOruta nidreyoLiddavagu
padravapaDisida kSUdra daityanna kondu subhadra jagake itta
nirdayanalla samudrashayana gOvardhana giriyanu uddharisida yadu
vardhana danuja vimardana lakSmIjanArdhana vara shESAdri nivAsa
caraNam 5
sarasijAsana manmatha Irvaru sutaru suratarangiNi tanuje puravE vaikuNTha indrAdya
mararu kinkararu garuDavAhana uraga paryanka niSkaLanka
saridoregaLa nAnariyenu venkaTagiriyali mereyuva karuNegaLarasane
mareyade poreyuva sharaNAgataranu marutAntargata siri vijayaviThThala
***
ಇಂಥಾ ಪ್ರಭುವ ಕಾಣೆನೋ ಈಜಗದೊಳ-
ಗಿಂಥಾ ಪ್ರಭುವ ಕಾಣೆನೋ ||pa||
ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ-
ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ||a.pa||
ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪು
ನೋಡದೆ ಬಂದು ಪೊರೆವ
ಗಾಡಿಕಾರನು ಗರುಡಾ –
ರೂಢ್ಯ ಗುಣವಂತ ಮಹಾ
ಪ್ರೌಢ ಪ್ರತಾಪಿ ಜಗದಿ
ಗೂಢದಿಂ ಸಂಚರಿಪ
ಪಾಡಿ ಪೊಗಳಿ ಕೊಂಡಾಡುವವರ ಮುಂ-
ದಾಡುತಲಿಪ್ಪನು ನಾಡೊಳಗಿದ್ದರು
ಕೇಡಿಗನೇ ನಾಡಾಡಿಗಳಂದದಿ
ಈಡುಂಟೇನೋ ಈ ವೆಂಕಟಗೆ-ಇಂಥಾ ||1||
ನಿಗಮ ತತಿಗಳರಿಯದ- ನೀರಜಭವಾ-
ದ್ಯಗಣಿತ ಸುರರು ಕಾಣದ
ಜಗದೊಡೆಯನು ಭಕ್ತ-
ರುಗಳಿಗೊಲಿದು ತ್ರಿಸ್ಥಾ-
ನಗಳತ್ಯಜಿಸಿ ಕಲಿ
ಯುಗದಿ ಭೂಮಿಗೆ ಬಂದು
ಅಗಣಿತ ಸುಗುಣಾರ್ಣವ- ಶ್ರೀ ಹರಿಯೇ
ಜಗದೊಳು ಸೇವಾದಿಗಳನು ಕೊಳುತಿಹ
ಅಘಹರ ಮೋಕ್ಷಾದಿಗಳನೆ ನೀಡುತ
ನಗೆಮೊಗದಲಿ ಚನ್ನಿಗನಿಂತಹನೊ – ಇಂಥಾ ||2||
ಭಾರ್ಗವಿ ಭೂಮಿವಲ್ಲಭ – ಭವದೂರ ಭಕ್ತ
ವರ್ಗಕೆ ಇವಸುಲಭ
ನಿರ್ಗುಣ ನಿರ್ವಿಕಾರ-
ಸ್ವರ್ಗದೈಶ್ವರ್ಯದಿಂದಾ-
ನಘ್ರ್ಯದ ಪದವನೀವ
ದೀರ್ಘಾಯುವಂತನೀತ
ಭಾರ್ಗವರಾಮ ನೃಪರ್ಗಳನೆಲ್ಲರ –
ಣಾಗ್ರದಿ ಜಯಿಸಿದ ಉಗ್ರಪ್ರತಾಪಿ
ಅಗ್ರಗಣ್ಯ ಸದ್ವಿಗ್ರಹ ಶ್ರೀಮದ –
ನುಗ್ರಹ ಮಾಡುತ ದುರ್ಗುಣ ಕಳೆವ ||3||
ನಿರ್ದುಃಖಾನಂದ ಭರಿತಾ – ನಿರ್ವಾಣ ಸುಖಕೆ
ಆದ್ರ್ರಹೃದಯ ತೋರುತ
ನಿದ್ರೆಯೊಳಿದ್ದವಗು –
ಪದ್ರಬಡಿಸಿ ದೈತ್ಯ
ಕ್ಷುದ್ರನಂಕೊಲಿಸಿ ಸು
ಭದ್ರ ಜಗಕೆ ಇತ್ತ
ನಿರ್ದಯನಲ್ಲ ಸಮುದ್ರಶಯನ ಗೋ-
ವರ್ಧನ ಗಿರಿಯನು ಉದ್ಧರಿಸಿದ ಯದು
ವರ್ಧನ ದನುಜ ವಿಮರ್ದನ ಲಕ್ಷ್ಮೀ ಜ –
ನಾರ್ದನ ವರ ಶೇಷಾದ್ರಿ ನಿವಾಸ – ಇಂಥಾ ||4||
ವಾರಿಜಾಸನ ಮನೋಜಾ ಈರ್ವರು ಸುತರು
ಸುರತರಂಗಿಣಿ ತನುಜಾ
ಪುರವೇ ವೈಕುಂಠ ಇಂದ್ರಾದ್ಯ
ಮರರು ಕಿಂಕರರು
ಗರುಡವಾಹನ ಉರಗ
ಪರಿಯಂಕ ನಿಷ್ಕಳಂಕ
ಸರಿದೊರೆಗಳ ನಾನರಿಯೆನು ವೆಂಕಟ
ಗಿರಿಯಲಿ ಇರುತಿಹ ಕರುಣೆಗಳರಸನೆ
ಮರೆಯದೆ ಸಲಹೋ ಶರಣಾಗತರನು
ಮರುತಾಂತರ್ಗತ ಸಿರಿ ವಿಜಯವಿಠ್ಠಲಾ – ಇಂಥಾ ||5||
***