Showing posts with label ನಮೋ ನಮೋ ಭವಗತಿ ಶ್ರೀ ನಾರಾಯಣಿ ಜಗದೀಶ್ವರೀ tulasi. Show all posts
Showing posts with label ನಮೋ ನಮೋ ಭವಗತಿ ಶ್ರೀ ನಾರಾಯಣಿ ಜಗದೀಶ್ವರೀ tulasi. Show all posts

Friday, 27 December 2019

ನಮೋ ನಮೋ ಭವಗತಿ ಶ್ರೀ ನಾರಾಯಣಿ ಜಗದೀಶ್ವರೀ ankita tulasi

by ತುಳಸೀರಾಮದಾಸರು
ನಮೋ ನಮೋ ಭವಗತಿ ಶ್ರೀ ನಾರಾಯಣಿ ಜಗದೀಶ್ವರೀ ಪ

ಸುಮಶರಜನನೀಸೋಮಸಹೋದರಿಕಮಲವಾಸಿನೀ ಸುಂದರೀ ಲಕ್ಷ್ಮೀ ಅ.ಪ

ವಿಮಲಾ ವಿಶ್ವಕುಟುಂಬಿನೀ ವೆಂಕಟಶೈಲ ನಿವಾಸಿನೀಅಮರೇಂದ್ರಾರ್ಚಿತಪಾದಸರಸಿಜಅಘವಿನಾಶಿನಿ ಅಖಿಲಾಪದಹರ 1

ಅಮೋಘ ಸಂಪತ್ಪ್ರದಾಯನೀ ಆರ್ತರಕ್ಷ ದೀಕ್ಷಾಮಣೀಪ್ರಮೋದಯಾ ಶ್ರೀರಮಾಭಾರ್ಗವೀಮಮಾಪಚಾರ ಕ್ಷಮಸ್ವಶಾರ್ಚಿಣೀ 2

ಹೇಮಕುಧರ ಧಾಮೇಶ್ವರಿತುಲಸಿರಾಮದಾಸನುತ ರಾಜೀವಾಕ್ಷಾಹಿಮಾಂಶು ಮುಖ ಹರಿಹಿತಪ್ರಿಯನಿಸ್ಸೀಮಾನದಾನಿನಿ ಸಜ್ಜನ ಪೋಷಿಣಿ 3
*******