..
kruti: tandevaradagopala vittala (ಪ್ರಹ್ಲಾದಗೌಡರು)
ಭಕ್ತಿಯಿಂದ ಭಜಿಸೋಣಧ್ವರಿಯನಮ್ಮ ಮುಕ್ತಿಪಥವ ನೀಡುವ ಕೃಷ್ಣವರ್ಯ ಪ
ಭಕ್ತಿ ಮುಕ್ತಿ ಸಹ ಯೋಜಿಸಿ ಅಶಕ್ತವ ಕಳೆದುಸಶಕ್ತರ ಮಾಡುವ ಶಕ್ತಿವಂತನವ ಅ.ಪ.
ಆರು ಮೂರು ದಾರಿ ತ್ಯಜಿಸುತ ಮತ್ತೆ ಮೂರೆರಡರ ಕೂಡಿ ಮೂರು ಮೂರು ಮೂರ್ತಿ ಮೂರು ಸ್ಥಾನದಿ ಮೂರೂ ಕಾಲದಿ ಮೂರು ಜನರು ಸೇರಿ 1
ಮಧ್ವಶಾಸ್ತ್ರದೊಳಗೆ ಮುಳುಗಿ ಮತ್ತೆ ಶ್ರೀ ಮಧ್ವಪುರಕೆ ಪೋಗಿ ಮದ್ ಹೃದ್ವನಜದೊಳಗೆ ಯೋಗೀ ಮಧ್ವ ಮುನೀಶರಪಾದಕೆ ಬಾಗಿ 2
ವಲಿದು ಬಂದ ಯೋಗಿ ವ್ಯಾಸದಾಸನೆಂದೆನಿಪ ವೇದವ್ಯಾಸಮಧ್ವ ಭೀಮಪನ ಗಿರೀಶಾ ತಂದೆವರದಗೋಪಾಲವಿಠಲೇಶಾ 3
***