kruti by Srida Vittala Dasaru Karjagi Dasappa
ON ಶಿವ-ಪಾರ್ವತಿ
ಅಗಜೆ ನಿನ್ನೊಗತನಕೆ ಜಗ ನಗುವುದೇ
ನಗರಾಜ ಈ ಮನೆಯ ಹೊಗಿಸಿದನೆ ಅಕಟಕಟ ಪ
ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡ
ತೊಟ್ಟ ತೊಗಲುಡುಗೆ ತಲೆಯೋಡು ಕೈಯ
ಸುಟ್ಟ ಸÀುಡಗಾಡ ಮನೆ ಅಖಿಲ ಭೂತೇಶ ಬಲು
ಸಿಟ್ಟಿನವನಂಗಸಂಗ ಬಯಸಬಹುದೆ 1
ಆರುಮೊಗದವನೊಬ್ಬ ಆರ್ತಜನು ಮೊಲೆಪಾಲು
ಕಾರಿ ಕಡುಮುನಿದು ಕಂಡರೆ ಸೇರರು
ಊರಿಗುಪಕಾರಿ ಒಡಲಹರಕ ಗಜಮುಖನು
ನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ 2
ಶಿವಶಕ್ತಿ ನಿನ್ನಂಥ ಸೌಭಾಗ್ಯವಂತೆಯಳ
ಭುವನದೊಳಗಾವಲ್ಲಿ ಕಾಣೆನಿನ್ನು
ಕವಿಜನಗಳೇನೆಂದು ಬಣ್ಣಿಸಿದರೊ ತಿಳಿಯೆ
ಭವದೂರ ಶ್ರೀದವಿಠಲರಾಯ ಬಲ್ಲ 3
***