..
ಸಖಿ ನೋಡ ದ್ವಾಪರ ಯುಗವ ದ್ವಾಪರಯುಗವ ಅಪಾರ ಭಾಗ್ಯವ ಶ್ರೀಪತಿ ಇವರಿಗೊಲಿದಿರುವ ಸಖಿ ಪ.
ಎಲ್ಲ ಗುರುಗಳ ಪಾದ ಬಲ್ಲಷ್ಟು ಬಲಗೊಂಡುಗೊಲ್ಲರ ಅರಸು ಜನಿಸಿದ ಗೊಲ್ಲರ ಅರಸು ಜನಿಸಿದ ಯುಗ ಧರ್ಮಎಲ್ಲವಿಸ್ತಾರ ರಚಿಸುವೆ ಸಖಿ 1
ಅಕ್ಕ ದ್ವಾಪರ ಧರ್ಮ ಶಕ್ಯವೆ ವರ್ಣಿಸಲುಲಕುಮಿದೇವಿಗೆ ವಶವಲ್ಲಲಕುಮಿದೇವಿಗೆ ವಶವಲ್ಲ ಯುಗಧರ್ಮತಕ್ಕಷ್ಟು ಹೇಳಿ ರಚಿಸುವೆ ಸಖಿ2
ಭೂಪ ದ್ವಾಪರದಲ್ಲೆ ಪಾಪಿ ಒಬ್ಬನಿಲ್ಲತಾಪಕೋಪಗಳು ಮೊದಲಿಲ್ಲತಾಪಕೋಪಗಳು ಮೊದಲಿಲ್ಲ ಧರೆ ಮ್ಯಾಲೆ ತಾಪಸ ಜನವೇ ಹರವಿತ್ತು ಸಖಿ 3
ಲಕ್ಷಕೋಟಿ ಸಂಖ್ಯದ ಅಕ್ಷಯ ದ್ರವ್ಯವಲಕ್ಷ್ಯವಿಲ್ಲದಲೆ ಕೊಡುವೋರುಲಕ್ಷ್ಯವಿಲ್ಲದಲೆ ಕೊಡುವೋರು ರಂಗನ ರಕ್ಷೆಯ ಮಾಡಿಜೈಸೋರು ಸಖಿ 4
ಕೃಷ್ಣನ ಪಾದದಲೆ ನಿಷ್ಠೆಯುಳ್ಳವರನ್ನುದೃಷ್ಟಿಲೆ ನೋಡಿ ಸಹಿಸದೆದೃಷ್ಟಿಲೆ ನೋಡಿ ಸಹಿಸದೆ ಧರೆಮ್ಯಾಲೆ ಪುಟ್ಟಿದನಾಗ ಕಲಿಬಂದು ಸಖಿ5
ಸತ್ಯಶೌಚ ಆಚಾರ ಉತ್ತಮ ಧರ್ಮತತ್ವವಿಚಾರ ಮೊದಲಿಲ್ಲತತ್ವವಿಚಾರ ಮೊದಲಿಲ್ಲ ಧರೆ ಮ್ಯಾಲೆ ದೈತ್ಯಮಯವಾಗಿ ಜಡದಿತು ಸಖಿಯೆ 6
ಹರಿಗುರುಗಳರಿಯದ ಪರಮ ಪಾಮರಜನ ಧರೆಯ ಮೇಲಾಗ ಜನಿಸಿತುಧರೆಯ ಮೇಲಾಗ ಜನಿಸಿತು ರಾಮೇಶನಪರಮ ಭಕ್ತರನ ದಣಿಸಿತು ಸಖಿಯೆ 7
****