Showing posts with label ಬೈಲಿಗೆ ಬೈಲಾಗಿತು ಬೈಲೊಳಗೆ purandara vittala. Show all posts
Showing posts with label ಬೈಲಿಗೆ ಬೈಲಾಗಿತು ಬೈಲೊಳಗೆ purandara vittala. Show all posts

Friday, 6 December 2019

ಬೈಲಿಗೆ ಬೈಲಾಗಿತು ಬೈಲೊಳಗೆ purandara vittala

ರಾಗ ಬೆಹಾಗ್. ಆದಿ ತಾಳ

ಬೈಲಿಗೆ ಬೈಲಾಗಿತು ಬೈಲೊಳಗೆ ||ಪ||

ಸೂತ್ರ ಬೊಂಬೆಯು ಮಾಡಿ ಹರಿ
ಸೂತ್ರದಿಂ ಕುಣಿಸಾಡಿ
ಸೂತ್ರ ಕಡಿಯಿತು ಬೊಂಬೆ ಮುರಿಯಿತು
ಆಟ ನಿಂತಿತು ಕೇಳೊ ಮನುಜ ||

ಚಂದಾಗಿ ಜ್ಯೋತಿಯು ಬೆಳಗಿ
ಎಣ್ಣೆಯು ಬತ್ತಿಯು ಹಾಕಿ
ಎಣ್ಣೆ ಮುಗಿಯಿತು ಬತ್ತಿ ಕಡಿಯಿತು
ಕತ್ತಲು ಆಯಿತು ಕೇಳೊ ಮನುಜ ||

ನೆಂಟರಿಷ್ಟರು ಕೂಡಿ ಅವರು
ಸಂತೆಗೋಸ್ಕರವಾಗಿ
ಸಂತೆ ಮುಗಿಯಿತು ಚಿಂತೆ ಹತ್ತಿತು
ಭ್ರಾಂತಿ ಆಯಿತು ಕೇಳೊ ಮನುಜ ||

ಬಾಲೆಯೊಬ್ಬಳು ಕೂಡಿ ಅವಳು
ನೀರಿಗೋಸ್ಕರ ಪೋಗಿ
ನೀರು ತುಂಬಿತು ಕಾಲು ಜಾರಿತು
ಕೊಡವು ಒಡೆಯಿತು ಕೇಳು ಮನುಜ ||

ಪರಿಪರಿ ವಿಧದಲಿ ನಾನು
ಪರಮಾತ್ಮನ ಸ್ತುತಿಯ ಮಾಡಿ
ಪರಮಮೂರುತಿ ಪುರಂದರವಿಠಲನೆ
ಕರುಣಿಸೊ ಪಾಲಿಸೊ ಪರಮದಯಾಳೊ ||
***

pallavi

bailige bailAgudu bailoLage

caraNam 1

sUtra bombeyu mADi hari sUtradim kuNisADi
sUtra kaDiyitu bombe muriyitu Ata nintidu kELo manuja

caraNam 2

candAgi jyOtiyu beLagi eNNeyu battiyu hAki eNNe
mugiyitu batti kaDiyitu kattalu Ayitu kELo mauja

caraNam 3

neNTariSTaru kUDi avaru sante gOskaravAgi
sante mugiyitu cinte hattitu bhrAnti Ayitu kELo manuja

caraNam 4

bAleyobbaLu kUDi avaLu nIri gOskara pOgi
nIru tumbitu kAlu jAritu koDavu oDeyitu kELu manuja

caraNam 5

paripari vidhadali nAnu paramAtmana stutiya mADi parama
mUruti purandara viTTalane karuNiso pAliso parama dayALo
***