RAO COLLECTIONS SONGS refer remember refresh render DEVARANAMA
ವೇಣು ವಿನೋದನ ವೈಭವ ನೋಡೇ ಸಖಿ ll ಪ ll
ಕುಣಿಸುವ ಪದಗತಿ ಫಣಿವೇಣಿಯರೊಳು ಅ l
ಭಿನಯದಿಂದ ಜಗವ ಮೋಹಿಪನ ll 1 ll
ಮಧು ಮುರಳಿ ಅಧರದಲಿ ಧರಿಸಿದ ಬಲ್ l
ವಿಧ ಮೋಹಿಸುತಿಹ ಮದನನಯ್ಯನ ll 2 ll
ಕುಟಿಲಾಳಕೀಯರ ಕಟಕದೊಳಗೆ ನಟ l
ನಟಿಸುವ ಕಮಲೇಶವಿಟ್ಠಲ ಚೆಲುವನಾ ll 3 ll
***