ಪೀಲೂ ರಾಗ ದಾದರಾ ತಾಳ
ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ ||ಧ್ರುವ||
ಅಪ್ಪನ ಕಂಡೆನಗೆ ತಾ ಅಪಾರ ಸಂತೋಷವಾಯಿತು
ಅಪ್ಪಿಕೊಂಬ್ಹಾಗೆ ಎನಗೆ ಅರ್ಪಿಸಿ ಪ್ರಾಣವ ||೧||
ತುಂಬಿ ತುಳುಕಿತಾನಂದ ಗುಂಭ ಗುರುತ ಕಂಡಿನ್ನು
ಕುಂಭಿನಿಯೊಳಗೆ ಪೂರ್ಣ ಅಂಬುಜಾಕ್ಷನ ||೨||
ಗುಪ್ತಲಿದ್ದ ಧನವು ತಾ ಪ್ರಾಪ್ತವ್ಯಾನಂತವಾಯಿತು
ತಪ್ಪದೆ ಮಹಿಪತಿಗೆ ತೃಪ್ತಿಹೊಂದಿತು ||೩||
****
ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ ||ಧ್ರುವ||
ಅಪ್ಪನ ಕಂಡೆನಗೆ ತಾ ಅಪಾರ ಸಂತೋಷವಾಯಿತು
ಅಪ್ಪಿಕೊಂಬ್ಹಾಗೆ ಎನಗೆ ಅರ್ಪಿಸಿ ಪ್ರಾಣವ ||೧||
ತುಂಬಿ ತುಳುಕಿತಾನಂದ ಗುಂಭ ಗುರುತ ಕಂಡಿನ್ನು
ಕುಂಭಿನಿಯೊಳಗೆ ಪೂರ್ಣ ಅಂಬುಜಾಕ್ಷನ ||೨||
ಗುಪ್ತಲಿದ್ದ ಧನವು ತಾ ಪ್ರಾಪ್ತವ್ಯಾನಂತವಾಯಿತು
ತಪ್ಪದೆ ಮಹಿಪತಿಗೆ ತೃಪ್ತಿಹೊಂದಿತು ||೩||
****
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ pa
ಅಪ್ಪನ ಕಂಡೆನಗೆ ತಾ ಅಪಾರ ಸಂತೋಷವಾಯಿತು ಅಪ್ಪಿಕೊಂಬ್ಹಾಗೆ ಎನಗೆ ಅರ್ಪಿಸಿ ಪ್ರಾಣವ 1
ತುಂಬಿ ತುಳುಕಿತಾನಂದ ಗುಂಭಗುರುತ ಕಂಡಿನ್ನು ಕುಂಭಿನಿಯೊಳಗೆ ಪೂರ್ಣ ಅಂಬುಜಾಕ್ಷನ 2
ಗುಪ್ತಲಿದ್ದ ಧನ ತಾ ಪ್ರಾಪ್ತ ವ್ಯಾನಂತವಾಯಿತು ತಪ್ಪದೆ ಮಹಿಪತಿಗೆ ತೃಪ್ತಿ ಹೊಂದಿತು 3
****