Showing posts with label ನಿತ್ಯ ಶುಭಮಂಗಳ ಶ್ರೀರಂಗನಾಥನಿಗೆ ಮೂರಂಗವೇಷನಿಗೆ tulasiramadasa. Show all posts
Showing posts with label ನಿತ್ಯ ಶುಭಮಂಗಳ ಶ್ರೀರಂಗನಾಥನಿಗೆ ಮೂರಂಗವೇಷನಿಗೆ tulasiramadasa. Show all posts

Sunday, 5 September 2021

ನಿತ್ಯ ಶುಭಮಂಗಳ ಶ್ರೀರಂಗನಾಥನಿಗೆ ಮೂರಂಗವೇಷನಿಗೆ ankita tulasiramadasa

 ಚನ್ನಪಟ್ಟಣದ ಅಹೋಬಲದಾಸರು

ನಿತ್ಯ ಶುಭಮಂಗಳ ಪ 


ಶ್ರೀರಂಗನಾಥನಿಗೆ ಮೂರಂಗವೇಷನಿಗೆ ಮಾರಾರಿಸಖನೆಂಬ ಮದನಪಿತಗೆ ನೂರೆಂಟುತಿರುಪತಿಗೆ ಕಾರಣನು ನಿಜದಿವ್ಯ ವೀರವೈಷ್ಣವನೆಂಬೊ ಮಹಾರಾಜಗೆ 1 

ನೀಲಕಂಠನಪ್ರಿಯಗೆ ಮೇಲುಕೋಟೆಯ ಧೊರೆಗೆ ಏಳುಸುತ್ತಿನ ಕೋಟೆಯೊಳಗಿರುವಗೇ ಕಾಳೆಕೊಂಬುಧ್ವನಿಯ ಕೇಳುವಾನಂದನಿಗೆ ವಾಲಿಯನು ಕೊಂದಂತ ವೋಂಕಾರಗೆ 2 

ಶಂಕರಪ್ರಿಯನಿಗೆ ಶ್ರೀಪಂಕಜಾಕ್ಷನಿಗೆ ಕುಂಕುಮಾಂಕಿತ ಪಕ್ಷಿವಾಹನನಿಗೆ ಕಂಕಣವು ಕರದೊಳಗೆ ಕಟ್ಟಿ ವೊ ಶ್ರೀಗುರು [ವಂಕ]ತುಲಸಿರಾಮದಾಸ ಪೋಷಿತನಿಗೆ 3

***