RSS song .
ಮರೆಯದಿರು ರಾಖಿಬಂಧನ್ ಹಿಂದುಗಳ ಐಕ್ಯ ಸಾಧನ್
ಬಂಧುಗಳ ಪ್ರೇಮ ಬಂಧನ್ ಇದೆ ಹಿಂದುರಾಷ್ಟ್ರ ಜೀವನ್ ||ಪ||
ಹಿನ್ನಡೆದ ಹಿಂದುಗಳಲಿ ಹುಮ್ಮಸನು ತುಂಬುತಿಹುದು
ಮೈಮರೆತ ಬಂಧುಗಳಲಿ ತನ್ನರಿವ ಬಿಂಬಿಸಿಹುದು
ಅಭಿಮಾನಪೂರ್ಣ ಜೀವನ್, ಸಾರುತಿದೆ ರಾಖಿ ಬಂದನ್ ||೧||
ಹೃದಯಕ್ಕೆ ಹೃದಯ ಬೆರೆಸಿ ನಿಜ ಪ್ರೇಮ ಝರಿಯ ಹರಿಸಿ
ಆಂತರಿಕ ಜ್ಯೋತಿ ಜ್ವಲಿಸಿ ನವ ಸ್ಫೂರ್ತಿಸುಧೆಯ ಸುರಿಸಿ
ಸಂಘಟನ ಮೂಲ ಸಾಧನ್, ಸಾರುತಿದೆ ರಾಖಿ ಬಂದನ್ ||೨||
ಸದ್ಧರ್ಮ ಮರ್ಮವರುಹಿ, ಸಂಸ್ಕೃತಿಯ ಸಾರ ತಿಳುಹಿ
ಕೇಶವನ ಮಂತ್ರವರುಹಿ, ಸಂಘಟನ ತಂತ್ರ ತಿಳುಹಿ
ರಾಷ್ಟ್ರೀಯ ಶ್ರೇಷ್ಠ ಜೀವನ್, ಸಾರುತಿದೆ ರಾಖಿ ಬಂದನ್ ||೨||
***
mareyadiru rAKibaMdhan hiMdugaLa aikya sAdhan
baMdhugaLa prEma baMdhan ide hiMdurAShTra jIvan ||pa||
hinnaDeda hiMdugaLali hummasanu tuMbutihudu
maimareta baMdhugaLali tannariva biMbisihudu
aBimAnapUrNa jIvan, sArutide rAKi baMdan ||1||
hRudayakke hRudaya beresi nija prEma Jariya harisi
AMtarika jyOti jvalisi nava sPUrtisudheya surisi
saMGaTana mUla sAdhan, sArutide rAKi baMdan ||2||
saddharma marmavaruhi, saMskRutiya sAra tiLuhi
kESavana maMtravaruhi, saMGaTana taMtra tiLuhi
rAShTrIya SrEShTha jIvan, sArutide rAKi baMdan ||2||
***