..
ಬೊಮ್ಮಗಟ್ಟಿರಾಯ ಪಾಲಿಸೋ ನಮ್ಮ ನೀ ಮಾರಾಯ
ಧರ್ಮ ಕಾಮ್ಯಾರ್ಥ ಕೊಡುವೊ ಕರುಣಾಂಬುಧಿ ಪ
ಸುಗ್ರೀವಗೆ ನೀ ಒಲಿದ್ವಾಲಿಯನು
ನಿಗ್ರ(ಹ) ಮಾಡುತ ಪರಮಾಗ್ರ(ಹ) ದಲಿ
ಸೀಗ್ರ (ಶೀಘ್ರ?) ದಿಂದಲಿ ದಶಗ್ರೀವನ ಲಂಕ-
ದುರ್ಗದಲ್ಲಾಡಿದ್ಯಗ್ನಿಯ ಒಡಗೂಡಿ 1
ರಾಮಪಾದಾಂಬುಜ ಸೇವಕ ಸೇತುವೆ
ಪ್ರೇಮದಿ ಕಟ್ಟಿ ನಿಂತನು ರಣದಿ
ನೇಮದಿಂದಲಿ ಸಂಜೀವನ ತಂದಾತ
ವಾಹನನಾದ ತ್ರಿಧಾಮದೊಡೆಯಗೆ 2
ವಾತಾತ್ಮಜ ರಘುನಾಥಗೆ ನೀ ನಿಜ-
ದೂತನೆನಿಸಿ ಬಹು ಪ್ರೀತಿಯಲಿ
ಭೂತಳದೊಳು ಪ್ರಖ್ಯಾತಿಯ ಪಡೆದೆ ನಿ-
ರ್ಭೀತನಾದ ಭೀಮೇಶಕೃಷ್ಣನ ಪ್ರಿಯ 3
***