ಮಗುಟ ವಿಶ್ವದೊಳೊಬ್ಬನೆ ಪ್ರಗಟ ಭಾಸ್ಕರ ಗುರು ದಯನೋಟ ರಸಕಾಯ ಸವಿದುಂಬೂಟ ಪ
ಭಾಸ್ಕರ ಗುರು ನಿಜದಯ ಲೇಸುದೋರುವ ವಿಜಯ ಭಾಸ್ಕರ ಗುರು ಅಭಯ ಹಸನಾದ ಪುಣ್ಯೋದಯ 1
ಭಾಸ್ಕರ ಕರುಣಾಕಟಾಕ್ಷ ಭಾಸುದು ಘನಪ್ರತ್ಯಕ್ಷ ಭಾಸ್ಕರ ಗುರು ನಿಜ ಭಿಕ್ಷ ಹಸನಾಗಿ ಮಾಡುವಾ ಸಂರಕ್ಷ 2
ಭಾಸ್ಕರ ಗುರು ನಿಜಬೋಧ ಭಾಸುವ ಘನಸರ್ವದಾ ಭಾಸ್ಕರ ಗುರು ಪ್ರಸಾದ ಸ್ವಸುಖದೋರುವ ಸಂವಿಸ್ವಾದ(?) 3
ಭಾಸ್ಕರ ಗುರು ಉಪದೇಶ ಭಾಸಲು ಬಲು ಸಂತೋಷ ಭಾಸ್ಕರ ಗುರುವರೇಶ ಈಶನಹುದೊ ಸರ್ವೇಶ 4
ಭಾಸ್ಕರ ಗುರುಕೃಪೆ ಜ್ಞಾನ ಲೇಸಾಗಿ ತೋರುವದುನ್ಮನ ಭಾಸ್ಕರ ಗುರುದಯ ಕರುಣ ದಾಸ ಮಹಿಪತಿಗಾಭರಣ5
****