Showing posts with label ಒಳ್ಳೇದೊಳ್ಳೇದು ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದ್ಯಾ purandara vittala. Show all posts
Showing posts with label ಒಳ್ಳೇದೊಳ್ಳೇದು ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದ್ಯಾ purandara vittala. Show all posts

Tuesday, 3 December 2019

ಒಳ್ಳೇದೊಳ್ಳೇದು ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದ್ಯಾ purandara vittala

ರಾಗ ಕಾಪಿ ಆದಿತಾಳ

ಒಳ್ಳೇದೊಳ್ಳೇದು ಎಲ್ಲ ಸ್ಥಳವ ಬಿಟ್ಟು
ಇಲ್ಲಿ ಅಡಗಿದ್ಯಾ ಬಲ್ಲಿದತನವೆ ||ಪ||

ಬಿಡೆ ಬಿಡನೊ ಎನ್ನ ಒಡೆಯ ತಿರುಮಲ ನಿನ್ನ
ಉಡಿಯ ಪೀತಾಂಬರ ಪಿಡಿದು ಸಲ್ಲಿಸಿಕೊಂಬೆ ||

ಎರವು ಮರವು ಮಾಡಿ ತಿರುಗಿಸಿ ಎನ್ನ
ಕೊರಳಿಗೆ ನಿನ್ನ ಚರಣ ಕಟ್ಟಿಕೊಂಬೆ ||

ಅತ್ತೆಯ ಮಕ್ಕಳಿಗೆ ತೆತ್ತಿಗ ನೀನಾಗಿ
ವಿತ್ತವಿತ್ತದ ರಾಶಿ ತಂದಿತ್ತ ಪರಿಯಲಿ ||

ಅತ್ತ ಇತ್ತಲಿ ನೋಡಿನ್ನೆತ್ತ ಪೋಗಲಿ ನಿನ್ನ
ಚಿತ್ತದಲಿ ಹುತ್ತಗಟ್ಟಿಕೊಂಬೆ ||

ಇರುಳು ಹಗಲು ಬಿಡದೆ ಗುರು ಪುರಂದರಗೊಲಿದೆ
ಅರಿದು ಏನು ಇಷ್ಟು ಪುರಂದರವಿಠಲನೆ ||
***

pallavi

oLLEdoLLEdu ella sthasaLava biTTu illi aDagidyA ballidatanave

caraNam 1

biDe biDano enna oDeya tirumala ninna uDiya pItAmbara piDidu sallisi kombe

caraNam 2

eravu maravu mADi tirugisi enna koralige ninna caraNa kattikombe

caraNam 3

atteya makkaLige tettiga nInAgi vittavittada rAshi tanditta pariyali

caraNam 4

atta ittali nODinnetta pOgali ninna cittadali hattagaTTikombe

caraNam 5

iruLu hagalu biDade guru purandaragolide aridu Enu iSTu purandara viTTalane
***